Harekala: ಹರೇಕಳ ನ್ಯೂಪಡ್ಪು ಮಸೀದಿ ತಡೆಗೋಡೆ ಕುಸಿತ-ತಪ್ಪಿದ ಅನಾಹುತ

Harekala: ಹರೇಕಳ ನ್ಯೂಪಡ್ಪು ಮಸೀದಿ ತಡೆಗೋಡೆ ಕುಸಿತ-ತಪ್ಪಿದ ಅನಾಹುತ


ಹರೇಕಳ: ಹರೇಕಳ ಗ್ರಾಮದ ಹೃದಯ ಭಾಗವಾದ ನ್ಯೂಪಡ್ಪುವಿನ ರಾಜರಸ್ತೆಗೆ ತಾಗಿಕೊಂಡಿರುವ ತ್ವಾಹ ಜುಮಾ ಮಸೀದಿಯ ತಡೆಗೋಡೆ ಗೋಡೆ ಕುಸಿದು ಬಿದ್ದಿದೆ. 
ಮಂಗಳವಾರದಿಂದ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ತಡೆಗೋಡೆ ಶಿಥಿಲಗೊಂಡು ಕುಸಿದು ಬಿದ್ದಿದೆ.
ತಡೆಗೋಡೆ ಕುಸಿದ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ, ಜನ ಸಂಚಾರ ಇಲ್ಲದಿದ್ದುದರಿಂದ ಸಂಭಾವಸಬಹುದಾದ ಬಾರಿ ದೊಡ್ಡ ಅನಾಹುತ ತಪ್ಪಿದೆ.
ಸ್ಥಳಕ್ಕೆ ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್, ಪಂಚಾಯತ್ ಸದಸ್ಯರಾದ ಬದ್ರುದ್ದೀನ್, ಅಬ್ದುಲ್ ಸತ್ತಾರ್, ಅಬ್ದುಲ್ ಬಶೀರ್ ಎಸ್.ಎಂ. ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತ್ವಾಹ ಜುಮಾ ಮಸ್ಜಿದ್ ಆಡಳಿತ ಕಮಿಟಿ ಮೊಹಲ್ಲಾದ ಯುವಕರೊಂದಿಗೆ ಸೇರಿಕೊಂಡು ರಸ್ತೆಯ ಅಡೆತಡೆಯನ್ನು ಸರಿಪಡಿಸಿದ್ದು, ಸೂಕ್ತ ಪರಿಹಾರಕ್ಕೆ ಮಸೀದಿ ಆಡಳಿತ ಕಮಿಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article