
Karkala: ಕಾರ್ಕಳದಲ್ಲಿ ಸರಕಾರದ ವಿರುದ್ಧ ಬ್ಲ್ಯಾಕ್ ಟೀ ಪ್ರತಿಭಟನೆ
Saturday, June 29, 2024
ಕಾರ್ಕಳ: ಕಾರ್ಕಳದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಹಾಲಿನ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕಾರ್ಕಳ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಕಾರ್ಕಳ ಬಸ್ ಸ್ಟ್ಯಾಂಡ್ ವಠಾರದಲ್ಲಿ ಬ್ಲ್ಯಾಕ್ ಟೀ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಬಸ್ ಸ್ಟ್ಯಾಂಡ್ ಸಾರ್ವಜನಿಕರಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್, ಹಾಲನ್ನು ಹಾಕದೆ ಚಹಾ ತಯಾರಿಸಿ ಹಂಚುವುದರ ಜೊತೆಗೆ ಕಾಂಗ್ರೆಸ್ ಸರಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಜೈನ್, ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್, ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮುಸ್ತಾಫ, ಬಿಜೆಪಿ ಮುಖಂಡರಾದ ಅನಂತಕೃಷ್ಣ ಶೆಣೈ, ನಿತ್ಯಾನಂದ ಪೈ, ಪುರಸಭೆ ಮಾಜಿ ಅಧ್ಯಕ್ಷೆ ಶೋಭಾ ದೇವಾಡಿಗ, ಪುರಸಭಾ ಸದಸ್ಯರಾದ ಅವಿನಾಶ್ ಶೆಟ್ಟಿ, ನೀತ ಆಚಾರ್ಯ, ಇನ್ನಿತರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.