Mangalore: ಆಡಳಿತ-ವಿಪಕ್ಷ ಸದಸ್ಯರಿಂದ ಗದ್ದಲಕ್ಕೆ ಕಾರವಾದ ಆಸ್ತಿ ತೆರಿಗೆ ವಿವಾದ-ತೆರಿಗೆ ಪರಿಷ್ಕರಿಸಿ ಮುಂದಿನ ಸಭೆಯಲ್ಲಿ ಚರ್ಚೆ: ಮೇಯರ್

Mangalore: ಆಡಳಿತ-ವಿಪಕ್ಷ ಸದಸ್ಯರಿಂದ ಗದ್ದಲಕ್ಕೆ ಕಾರವಾದ ಆಸ್ತಿ ತೆರಿಗೆ ವಿವಾದ-ತೆರಿಗೆ ಪರಿಷ್ಕರಿಸಿ ಮುಂದಿನ ಸಭೆಯಲ್ಲಿ ಚರ್ಚೆ: ಮೇಯರ್


ಮಂಗಳೂರು: ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳದ ಕುರಿತಂತೆ ಸಭೆಯಲ್ಲಿ ಪ್ರಸ್ತಾವಿಸಿದ ಶಾಸಕ ಡಾ. ಭರತ್ ಶೆಟ್ಟಿ, 2023ರಲ್ಲಿ ಆಸ್ತಿ ತೆರಿಗೆ  ಹೆಚ್ಚಳವಾದಾಗ ಆಗ ಅದನ್ನು ಪರಿಷ್ಕರಿಸಿ ಕ್ರಮ ವಹಿಸಲಾಗಿತ್ತು. ಇದೀಗ ಮತ್ತೆ ಹೆಚ್ಚಳ ಮಾಡಲಾಗಿದೆ. 2021ರಲ್ಲಿ ಮಾರ್ಗದರ್ಶಿ ದರ (ಗೈಡೆನ್ಸ್ ವ್ಯಾಲ್ಯೂ)ದಲ್ಲಿ  ಹೆಚ್ಚಳಕ್ಕೆ ಕೇಂದ್ರದಿಂದ ಸೂಚನೆ ಬಂದಿದ್ದರೂ, ಅದನ್ನು ವಿವಿಧ ಹಂತಗಳಲ್ಲಿ ದರ ನಿಗದಿಪಡಿಸಿ ಪರಿಷ್ಕರಣೆ ಮಾಡುವ ಅಧಿಕಾರ ಮನಪಾಕ್ಕೆ ಇದೆ ಎಂದು ಹೇಳಿದರು.

ಮೇಯರ್ ಸುಧೀರ್ ಶೆಟ್ಟಿಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿದರು. 2023ರಲ್ಲಿ ಮನಪಾ ಆಡಳಿತ ಜನರಿಗೆ ಹೊರೆ ಆಗದಂತೆ ಪರಿಷ್ಕರಿಸಿತ್ತು ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿಪ್ರತಿಕ್ರಿಯಿಸಿದರು.

2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಎಲ್ಲಾ ನಗರ ಪಾಲಿಕೆಗಳ ತೆರಿಗೆ ಪರಿಷ್ಕರಣೆ ಗೈಡೆನ್ಸ್ ವ್ಯಾಲ್ಯೂನಂತೆ ನಡೆಸುವಂತೆ ಆದೇಶ ಹೊರಡಿಸಿತ್ತು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಅನುಮೋದನೆ ನೀಡಿದ್ದರು. ಆ ಸಂದರ್ಭದಲ್ಲಿಯೇ ವಿಪಕ್ಷ ಸದಸ್ಯರು ವಿರೋದಿ ಸಿದ್ದರು ಎಂದು ಹೇಳಿದಾಗ ಸಭೆಯಲ್ಲಿ ಕೆಲಹೊತ್ತು ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಹಿಂದೆ ಆದೇಶ ಆಗಿರುವುದನ್ನು ಒಪ್ಪುತ್ತೇವೆ. ಆದರೆ ಬಳಿಕ ಅದನ್ನು ಹೊರೆಯಾಗದಂತೆ ಕ್ರಮ ವಹಿಸಲಾಗಿತ್ತು. ಈಗ ಕೂಡಾ ಅದೇ ರೀತಿಯಲ್ಲಿ ಮಾಡಬೇಕಾಗಿದೆ  ಎಂದು ಶಾಸಕ ಡಾ. ಭರತ್ ಶೆಟ್ಟಿಸಲಹೆ ನೀಡಿದರು.

ಮೇಯರ್ ಸುಧೀರ್ ಶೆಟ್ಟಿಪ್ರತಿಕ್ರಿಯಿಸಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಹೊಸ ತೆರಿಗೆ ಪರಿಷ್ಕರಣೆ ಬಗ್ಗೆ ಕಾರ್ಯಸೂಚಿ ಮಂಡಿಸಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಪಾಲಿಕೆ ನಿಯೋಗತೆರಳಿ ನಗರಾಭಿವೃದ್ಧಿ ಸಚಿವರ ಜತೆ ಚರ್ಚೆ ಮಾಡಿ ಹೊರೆ ಆಗದ ರೀತಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗುವುದು  ಎಂದು ಹೇಳಿದರು.

ಮನಪಾ ಸದಸ್ಯರಿಗೆ ತಲಾ 1 ಕೋಟಿ ರೂ. ಅನುದಾನ

ಸಭೆಯ ಆರಂಭದಲ್ಲಿಯೇ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ಮನಪಾ ಸದಸ್ಯರ ಅನುದಾನವನ್ನು 1 ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕೆಂಬ ಬೇಡಿಕೆ  ಮಂಡಿಸಿದರು. ಈ ಬಗ್ಗೆ ಮನಪಾ ಸದಸ್ಯರ ಒತ್ತಾಯದ ಬಳಿಕ ಮನಪಾ ಸದಸ್ಯರಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಲಾಗುವ ಅನುದಾನವನ್ನು 75  ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಏರಿಕೆ ಮಾಡಿ ಮೇಯರ್ ಸುಧೀರ್ ಶೆಟ್ಟಿ ಘೋಷಿಸಿದರು.

ಮಾತ್ರವಲ್ಲದೆ ಆರಂಭಿಕವಾಗಿ 50 ಲಕ್ಷ ರೂ.ಗಳ ಕಾಮಗಾರಿಯ ಅಂದಾಜು ಪಟ್ಟಿನೀಡುವಂತೆ ಸೂಚಿಸಿದಾಗ ಸದಸ್ಯರಿಂದ ಮತ್ತೆ ಆಕ್ಷೇಪ ವ್ಯಕ್ತವಾಗಿ ಕೊಡುವುದಾದರೆ  ಪೂರ್ಣ 1 ಕೋಟಿ ರೂ.ಗಳಿಗೆ ಅನುದಾನ ನೀಡಿ, ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಿ ಎಂದು ಪಟ್ಟುಹಿಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article