Kasaba bengre: ಡಿ.ವೈ.ಎಫ್.ಐ. ಬೆಂಗ್ರೆ ಗ್ರಾಮ ಸಮಿತಿ ವತಿಯಿಂದ ಕಸಬಾ ಬೆಂಗ್ರೆ ಪ್ರಾಥಮಿಕ ಶಾಲೆಯ ಆವರಣಗೋಡೆಯ ಸಮಸ್ಯೆ ಮತ್ತು ಕೊಠಡಿಗಳ ದುರಸ್ತಿಗೆ ಶೀಘ್ರ ಪರಿಹಾರ ಕಲ್ಪಿಸಿಕೊಡಲು ಕ್ಷೇತ್ರ ಶಿಕ್ಷಣಾಧಿ‌ಕಾರಿಗೆ ಮನವಿ

Kasaba bengre: ಡಿ.ವೈ.ಎಫ್.ಐ. ಬೆಂಗ್ರೆ ಗ್ರಾಮ ಸಮಿತಿ ವತಿಯಿಂದ ಕಸಬಾ ಬೆಂಗ್ರೆ ಪ್ರಾಥಮಿಕ ಶಾಲೆಯ ಆವರಣಗೋಡೆಯ ಸಮಸ್ಯೆ ಮತ್ತು ಕೊಠಡಿಗಳ ದುರಸ್ತಿಗೆ ಶೀಘ್ರ ಪರಿಹಾರ ಕಲ್ಪಿಸಿಕೊಡಲು ಕ್ಷೇತ್ರ ಶಿಕ್ಷಣಾಧಿ‌ಕಾರಿಗೆ ಮನವಿ


ಕಸಬಾ ಬೆಂಗ್ರೆ: ಜೂ.25 ರಂದು ಡಿ.ವೈ.ಎಫ್.ಐ. ಬೆಂಗ್ರೆ ಗ್ರಾಮ ಸಮಿತಿ ಮಂಗಳೂರು ತಾಲೂಕಿನ ಬೆಂಗ್ರೆ ಕಸಬಾ ಸರಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯ ಕುರಿತು ಕಳೆದ ಮೂರು ವರ್ಷಗಳಿಂದ ಶಾಲೆಯ ಆವರಣಗೋಡೆಯ ಸಮಸ್ಯೆ ಕುರಿತು ಶಾಲಾ ಸಮಿತಿಯಿಂದ ಸಂಭಂದಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಮನವಿಗಳನ್ನು ನೀಡಿದರು ಯಾವುದೇ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. 

ಕಳೆದ ಎರಡು ವರ್ಷಗಳಿಂದ ಆವರಣಗೋಡೆಯ ಭಾಗಗಳು ಬೀಳುತಿದ್ದು, ಶನಿವಾರ ಮತ್ತೆ ಮಕ್ಕಳಿರದ ಸಂಜೆ ಸಂಧರ್ಭದಲ್ಲಿ ಗೋಡೆ ಭಾಗ ಬಿದ್ದಿದೆ. ಅಪಾಯ ಸ್ಥಿತಿಯಲ್ಲಿರುವ ಆವರಣಗೋಡೆಯ ಪುನರ್ನಿರ್ಮಾಣ ಶಾಲಾ ತರಗತಿ ದುರಸ್ತಿ ಸಮಸ್ಯೆಗೆ ಸಂಭಂದಿಸಿ ಜನವರಿ 11,2024 ರಂದು ಡಿ.ವೈ.ಎಫ್.ಐ. ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಸಮಸ್ಯೆ ಪರಿಹರಿಸಲು ಮನವಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದ್ದರು.

ಅದರಂತೆ ಡಿ.ಡಿ.ಪಿ.ಐ ಹಾಗೂ ಶಾಲೆಯ ಕಾಮಗಾರಿ ಕೆಲಸಕ್ಕೆ ಸಂಭಂದಿಸಿ ಕಾರ್ಯನಿರ್ವಾಹಕರನ್ನು ಬೇಟಿ ಮಾಡಿ ಚರ್ಚಿಸಿದ್ದೇವು. ಅದರಂತೆ ಕಾರ್ಯ ನಿರ್ವಾಹಕರು ನೂತನ ಕಾಮಗಾರಿ ಅಂದಾಜು ವೆಚ್ಚಗಳನ್ನು ಸಿದ್ದಪಡಿಸಿ ಇಲಾಖೆಗೆ ಸಲ್ಲಿಸಿತ್ತು. 

ಪ್ರಸ್ತುತ ಮತ್ತೆ ಆವರಣಗೋಡೆಯ ಒಂದು ಭಾಗ ಬಿದ್ದ ಕಾರಣ ಇತರ ಭಾಗಗಳು ಅಪಾಯ ಸ್ಥಿತಿಯಲ್ಲಿರುವ ವಿಚಾರಗಳನ್ನು ತಿಳಿಸಿ ಚರ್ಚಿಸಲಾಯಿತು.ಶಾಲಾ  ಆವರಣಗೋಡೆ ಮತ್ತು ಕೊಠಡಿಗಳ ದುರಸ್ತಿಗಳ ಮತ್ತು ಇತರ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿ ಎಸ್ಟಿಮೇಶನ್ ರಾಜ್ಯ ಸಮಿತಿಗೆ ಈಗಾಗಲೇ ಕಲಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.

ಮನವಿಯನ್ನು ಸ್ವೀಕರಿಸಿ ಮತ್ತೊಮ್ಮೆ ಶೀಘ್ರ ಪರಿಹರಿಸುವಂತೆ ರಾಜ್ಯದ ಶಿಕ್ಷಣ ಸಂಭಂದಿಸಿದ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದೆ ಪ್ರಾರಂಭವಾಗಬೇಕೆಂದು ವಾರದೊಳಗೆ ಕೆಲಸಕಾರ್ಯಕ್ಕೆ ಸಂಬಂಧಿಸಿದ ವಿಚಾರ ಸ್ಪಷ್ಟ ಪಡಿಸುವಂತೆ ತಿಳಿಸಲಾಯಿತು.

ಇಲ್ಲದಿದ್ದರೆ ಕಚೇರಿ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಡಿ.ವೈ.ಎಫ್.ಐ. ಬೆಂಗ್ರೆ ನೀಡಲಾಯಿತು.

ಈ ಸಂಧರ್ಭದಲ್ಲಿ ಡಿ.ವೈ.ಎಫ್.ಐ. ರಾಜ್ಯ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ದ.ಕ. ಜಿಲ್ಲಾ ಸಹ ಕಾರ್ಯದರ್ಶಿ ಅಬ್ದುಲ್ ತೈಯೂಬ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಪಿ.ಜಿ. ರಫೀಕ್,11ನೇ ಡಿ.ವೈ.ಎಫ್.ಐ. ಘಟಕದ ಅಧ್ಯಕ್ಷರಾದ ಝುಬೈರ್, ನಾಸಿರ್, ಬಾಸ್, ಯಹಿಯಾ ಬಿಲಾಲ್, ರಫೀಕ್, ಮುಹಾಝ್, ಫಯಾಝ್ ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article