
Kasaragodu: ಭೂ ಸೇನೆಗೆ ಲೆಫ್ಟಿನೆಂಟ್ ಆಗಿ ಕಾಸರಗೋಡಿನ ಸಾತ್ವಿಕ್ ರೈ
ಕಾಸರಗೋಡು: ನಗರದ ನಿವಾಸಿ ಸಾತ್ವಿಕ್ ಎಸ್. ರೈ ಭಾರತೀಯ ಭೂ ಸೇನೆಗೆ ಲೆಫ್ಟಿನೆಂಟ್ ಆಗಿ ನೇರ ನೇಮಕಾತಿ ಮೂಲಕ ಆಯ್ಕೆಗೊಂಡಿದ್ದಾರೆ.
ಜೂನ್ 8ರಂದು ಗಯಾ ಬಿಹಾರದ ಆಫೀಸರ್ಸ್ ಟೈನಿಂಗ್ ಅಕಾಡೆಮಿಯಲ್ಲಿ ವರ್ಷ ಕಾಲದ ಕಠಿನ ತರಬೇತಿಯ ಬಳಿಕ ಭೂ ಸೇನೆಯ ಮುಖ್ಯಸ್ಥ ಲೆ. ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಭೂ ಸೇನೆಯ ಹುದ್ದೆಯನ್ನು ಸ್ವೀಕರಿಸಿದರು.
ಅವರ ಹೆತ್ತವರಾದ ಕಾಸರಗೋಡಿನ ಹಿರಿಯ ನ್ಯಾಯವಾದಿ ಹಾಗೂ ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷರು ಆಗಿದ್ದ ಸದಾನಂದ ರೈ ಕಾಸರಗೋಡು ಚಿನ್ಮಯ ವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಶರಣ್ಯಾ ಎಸ್. ರೈ, ಸಹೋದರ ರಿತ್ವಿಕ್ ರೈ ಭಾಗವಹಿಸಿದ್ದರು.
ಸಾತ್ವಿಕ್ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಮತ್ತು ಪದವಿಪೂರ್ವ ವಿದ್ಯಾಭ್ಯಾಸವನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆನಲ್ಲಿ ಮುಗಿಸಿ ಗಯಾ ಬಿಹಾರದ ಮಿಲಿಟರಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರಿಕೊಂಡರು. ತರಬೇತಿಯೊಂದಿಗೆ ಎಂಜಿನಿಯರಿಂಗ್ ಬಿ.ಟೆಕ್ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡರು. ಬಳಿಕ ನೇರ ನೇಮಕಾತಿ ಮೂಲಕ ಸೇನೆಯ ಮಹತ್ವದ ಲೆಫ್ಟಿನೆಂಟ್ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಪ್ರತಿಭಾವಂತ ಕ್ರೀಡಾ ಪಟು ಕೂಡ ಆಗಿರುವ ಸಾತ್ವಿಕ್ ರೈ ತನ್ನ ಸಾಧನೆಗಳಿಗೆ ಹೆತ್ತವರ ಪ್ರೋತ್ಸಾಹ ಕಾರಣವೆಂದು ಹೇಳುತ್ತಾರೆ.