
Kundapura: ಕುಂದಾಪುರ ಶಾಸಕರ ಕಚೇರಿ ಕಾರ್ಯಾರಂಭ
Saturday, June 15, 2024
ಕುಂದಾಪುರ: ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಜಾರಿಯಲ್ಲಿದ್ದ ಚುನಾವಣಾ ಆಯೋಗದ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಹಿಂಪಡೆದ ಕಾರಣ ಕುಂದಾಪುರದ ಶಾಸಕರ ಕಚೇರಿ ಕಾರ್ಯರಂಭ ಮಾಡಿದೆ.
ಜೂನ್ 15 ರಂದು ಕಚೇರಿ ಆರಂಭಗೊಳ್ಳುತ್ತಿದ್ದಂತೆಯೇ, ಸಾರ್ವಜನಿಕರು ಕಚೇರಿಗೆ ಆಗಮಿಸಿ, ತಮ್ಮ ಬೇಡಿಕೆ, ಮನವಿ, ಅಹವಾಲುಗಳನ್ನು ಸಲ್ಲಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ತಾಳ್ಮೆಯಿಂದ ಎಲ್ಲರನ್ನೂ ವಿಚಾರಿಸಿ, ಮನವಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಗಳನ್ನು ಜರುಗಿಸಿದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರ ಕುಂದು ಕೊರತೆ ವಿಚಾರಗಳ ಬಗ್ಗೆ ಹಾಗೂ ಸರಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ ಶನಿವಾರ ಸಾರ್ವಜನಿಕರ ಅಹವಾಲುಗಳನ್ನು ಕಚೇರಿಯಲ್ಲಿ ಸ್ವೀಕರಿಸಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾಶ್ರೀ, ಪ್ರಶಾಂತ ಶೇರಿಗಾರ್ ಕುಂಬ್ರಿ ಕೋಟೇಶ್ವರ ಇವರಿಗೆ ಶಾಸಕರ ಅನುದಾನದ ನಿಧಿ ಅಡಿಯಲ್ಲಿ ಸಿಗುವ ವಾಕ್ ಶ್ರವಣ ಸಾಧನಗಳನ್ನು ಶಾಸಕ ಕೊಡ್ಗಿ ಹಸ್ತಾಂತರಿಸಿದರು.