Kundapura: ಕಮಲಶಿಲೆ ದೇವಸ್ಥಾನದಲ್ಲಿ ಗೋಕಳ್ಳತನಕ್ಕೆ ಯತ್ನಿಸಿದ ಪ್ರಕರಣ-ಇಬ್ಬರು ಆರೋಪಿಗಳ ಬಂಧನ

Kundapura: ಕಮಲಶಿಲೆ ದೇವಸ್ಥಾನದಲ್ಲಿ ಗೋಕಳ್ಳತನಕ್ಕೆ ಯತ್ನಿಸಿದ ಪ್ರಕರಣ-ಇಬ್ಬರು ಆರೋಪಿಗಳ ಬಂಧನ


ಕುಂದಾಪುರ: ಇತಿಹಾಸ ಪ್ರಸಿದ್ದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಾಮೇಶ್ವರೀ ದೇವಾಲಯದ ಗೋಶಾಲೆಯಲ್ಲಿ ಜೂ.16 ರಂದು ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಗೋಶಾಲೆಗೆ ನುಗ್ಗಿ ಗೋಕಳ್ಳತನ ಮಾಡಲು ಯತ್ನಿಸಿದ್ದ ಅರೋಪಿಗಳನ್ನ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಜ್ಪೆ ವಾಜೀದ್ ಜೆ. (29) ಹಾಗೂ ಬಜ್ಪೆ ಫೈಜಲ್ (40) ಬಂಧಿತರು. ಕೃತ್ಯಕ್ಕೆ ಬಳಸಿದ ಹುಂಡಾಯ್ ಕ್ರೇಟಾ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದೇವಾಲಯದ ಗೋಶಾಲೆಗೆ ನುಗ್ಗಿದ ಸಂದರ್ಭ ಕಣ್ಗಾವಲಿಗಿದ್ದ ಸಿಸಿಟಿವಿ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಇದನ್ನು ಕಂಡು ದೇವಾಲಯದ ಸೆಕ್ಯೂರಿಟಿ ಗಾರ್ಡ್ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದರು.

ತಕ್ಷಣ ಸೆಕ್ಯುರಿಟಿ ಗೋಶಾಲೆಗೆ ಧಾವಿಸುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಗೋ ಶಾಲೆಯೊಳ ಹೊಕ್ಕಿದ್ದ ಕಳ್ಳರು ಎರಡು ದನಗಳ ಹಗ್ಗ ತುಂಡರಿಸಿದ್ದರು. ಒಂದು ದನವನ್ನು ಮೊದಲೇ ಹೊರ ತಂದಿದ್ದರು. ಸಿಸಿಟಿವಿ ವಿಡಿಯೋಗಳನ್ನ ಪರಿಶೀಲಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಅರೋಪಿಗಳನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರೋಪಿಗಳನ್ನು ಕುಂದಾಪುರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿಗಳನ್ನು ಹದಿನೈದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಶಂಕರಣರಾಯಣ ಪೋಲೀಸರ ಕ್ಷಿಪ್ರ ಕಾರ್ಯಾಚಾರಣೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article