
Mangalore: 111ನೇ ಮನ್ ಕಿ ಬಾತ್ ವೀಕ್ಷಿಸಿದ ಶಾಸಕ ವೇದವ್ಯಾಸ ಕಾಮತ್
Sunday, June 30, 2024
ಮಂಗಳೂರು: ಕಳೆದ ಲೋಕಸಭಾ ಚುನಾವಣೆಯ ನಂತರ ಮೊದಲ ಬಾರಿಗೆ ‘ಮನ್ ಕಿ ಬಾತ್’ನ 111ನೇ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ನಗರ ದಕ್ಷಿಣದ ಬಜಾಲ್ 53ನೇ ವಾರ್ಡಿನ ಜಲ್ಲಿಗುಡ್ಡೆ ಸೀತಾರಾಮ ಸುವರ್ಣ ಅವರ ಮನೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಸಹಿತ ಅನೇಕ ಪ್ರಮುಖರು ಈ ಕಾರ್ಯಕ್ರಮವನ್ನು ವೀಕ್ಷಿಸಿದರು.
ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಿಕೊಟ್ಟ ಪ್ರತಿಯೊಬ್ಬ ಭಾರತೀಯರಿಗೂ ಪ್ರಧಾನಿಗಳು ಧನ್ಯವಾದಗಳನ್ನು ಸಮರ್ಪಿಸಿದ ನಂತರ ಮತ್ತೊಮ್ಮೆ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಯಶಸ್ಸಿಗೆ ಮನವಿ ಮಾಡಿದ್ದು, ಈಗಾಗಲೇ ಮಂಗಳೂರು ದಕ್ಷಿಣದ ವಿವಿಧ ಭಾಗಗಳಲ್ಲಿ ಸಸಿಗಳನ್ನು ನೆಟ್ಟು ಪ್ರಧಾನಿಗಳ ಕರೆಗೆ ಓಗೊಡಲಾಗಿದೆ. ಹೆಮ್ಮೆಯ ಪ್ರಧಾನಮಂತ್ರಿಗಳ ಸ್ಪೂರ್ತಿದಾಯಕ ಮಾತುಗಳೇ ನಮ್ಮೆಲ್ಲರನ್ನು ಇನ್ನಷ್ಟು ಕಾರ್ಯಗಳಿಗೆ ಹುರಿದುಂಬಿಸುತ್ತವೆ ಎಂದು ಶಾಸಕರು ಹೇಳಿದರು.
ಮಂಡಲದ ಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಪದಾಧಿಕಾರಿಗಳು, ಮನಪಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.