
Mangalore: ವಾಮಂಜೂರ್‌ನಲ್ಲಿ ಅರೋಗ್ಯ ತಪಾಸಣಾ ಶಿಬಿರ
ಮಂಗಳೂರು: ವಾಮಂಜೂರಿನ ಆರ್.ಜಿ. ಫೌಂಡೇಶನ್ ನೇತೃತ್ವದಲ್ಲಿ ಸಂವೇದನಾ ಮಹಿಳಾ ಸಮಿತಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ವೈಟ್ ಗ್ರೋ ಎಲ್.ಎಲ್.ಪಿ ಸಹಭಾಗಿತ್ವದಲ್ಲಿ ವಾಮಂಜೂರು ಪರಿಸರದ ಸರ್ವ ನಾಗರಿಕರ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಜೂ.30 ರಂದು ನೆರವೇರಿತು.
ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ವಾಮಂಜೂರು ಚರ್ಚ್ ಧರ್ಮಗುರು ಫಾ. ಜೇಮ್ಸ್ ಡಿ’ಸೋಜ, ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲಿಯಾನ್, ಆರ್‌ಜಿ ಫೌಂಡೇಶನ್ ಅಧ್ಯಕ್ಷ ಎಂಜಿ ಹೆಗ್ಡೆ ಅವರು ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಅಶಕ್ತ ಮಗುವಿಗೆ ವೀಲ್ ಚೇರ್ ವಿತರಣೆಯನ್ನು ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಆರೋಗ್ಯ ಎಂಬುದು ಸಮಾಜದ ಅವಿಭಾಜ್ಯ ಅಂಗ. ಎಲ್ಲರಿಗೂ ಉತ್ತಮ ಅರೋಗ್ಯ ಇದ್ದರೆ ಸಮಾಜಕ್ಕೂ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಜನರಲ್ಲಿ ಸರ್ವೇ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆರ್‌ಜಿ ಫೌಂಡೇಶನ್, ಸಂವೇದನಾ ಮಹಿಳಾ ಸಮಿತಿ, ಫಾದರ್ ಮುಲ್ಲರ್ ಆಸ್ಪತ್ರೆ ಇಂದು ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರ ಹೆಚ್ಚು ಫಲಕಾರಿ ಆಗಲಿದೆ. ಗ್ರಾಮೀಣ ಭಾಗದ ಜನರು ಇದರ ಪ್ರಯೋಜನ ಪಡೆಯಬೇಕು. ಇಂತಹ ಶಿಬಿರಗಳು ಇನ್ನಷ್ಟು ಈ ಸಂಸ್ಥೆಗಳಿಂದ ಆಗಬೇಕು ಎಂದರು.
ವಾಮಂಜೂರು ಇಸಾಹುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಟಿ. ಇಬ್ರಾಹಿಂ, ವಾಮಂಜೂರು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಶೆಟ್ಟಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ವೈಟ್ ಗ್ರೋ ಇಂಡಸ್ಟ್ರೀ ಪಾಲುದಾರರಾದ ಗ್ಲಾಡಿ ಆಳ್ವರೀಸ್, ಫಿಲೊಮಿನಾ ಲೋಬೊ, ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ರೈ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಾರಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಜಿ. ಫೌಂಡೇಶನ್ ಅಧ್ಯಕ್ಷ ಎಂ.ಜಿ. ಹೆಗಡೆ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ, ಸಹಕರಿಸಿದವರಿಗೆ ಕೃತಜ್ಞತೆಯನ್ನು ತಿಳಿಸಿದರು.
ಸಂವೇದನಾ ಮಹಿಳಾ ಸಮಿತಿ ಅಧ್ಯಕ್ಷೆ ಮರಿಯಾ ಕುಟಿನ್ಹಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಯೋಜಕಿ ಬಬಿತಾ ನಿರೂಪಿಸಿ, ರೋಷನ್ ವಂದಿಸಿದರು.