ಮಂಗಳೂರು: ಈ ವರ್ಷದಿಂದ ನಾರಾಯಣ ಗುರು ಜಯಂತಿ ಆಚರಣೆಗೆ ಮನಪಾ ವ್ಯಾಪ್ತಿಯಲ್ಲಿ ಬರುವ ರಿಜಿಸ್ಟರ್ ಆಗಿರುವ ನಾರಾಯಣಗುರು ಮಂದಿರಗಳು ನಾರಾಯಣಗುರು ಜಯಂತಿ ಆಚರಿಸಿ, ಅದರ ಖರ್ಚಿನ ದಾಖಲೆಯನ್ನು ಮನಪಾಗೆ ಸಲ್ಲಿಸಿದಲ್ಲಿ ಅಂತವರಿಗೆ 15 ಸಾವಿರ ರೂ. ನೀಡಲಾಗುವುದು ಎಂದು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.