Mangalore: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮ

Mangalore: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮ


ಮಂಗಳೂರು: ಮಂಗಳೂರಿನ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ನಾಯಕನಾದವನು ಮುಖ್ಯವಾಗಿ ಪ್ರಾಮಾಣಿಕತೆ, ಶಿಸ್ತು, ನೈತಿಕತೆಯಂತಹ ಗುಣಗಳನ್ನು ರೂಢಿಸಿಕೊಂಡು ಯಾವುದೇ ಭೇದಭಾವ ಇಲ್ಲದೆ ಕೆಲಸವನ್ನು ಮಾಡಬೇಕು. ಸ್ವಂತಕ್ಕೆ ಸಲ್ಪ ಸಮಾಜಕ್ಕೆ ಸರ್ವಸ್ವ ಎಂಬಂತೆ ಮೊದಲು ಸಮಸ್ತ ಸಮಾಜದ ಏಳಿಗೆಯನ್ನು ಅರಿತು ಕಾರ್ಯೋನ್ಮುಖರಾಗಬೇಕು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಕನಸುಗಳು ಇರಬೇಕು ಎಂದು ಹೇಳಿದರು.

ಕನಸು ಕಂಡರೆ ಸಾಲದು ಆ ಕನಸು ನಿಮ್ಮ ನರನಾಡಿಗಳಲ್ಲಿ ಹರಿಯಬೇಕು. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಆ ಕನಸು ನಿಮ್ಮನ್ನು ಹಿಂಬಾಲಿಸಬೇಕು. ನಮ್ಮ ಮಕ್ಕಳು ಇತಿಹಾಸವನ್ನು ಹುಟ್ಟು ಹಾಕಬೇಕೆಂದು ಹೆತ್ತವರು ಕನಸು ಕಾಣುತ್ತಾರೆ. ಮಕ್ಕಳು ಅವರವರ ಇತಿಹಾಸವನ್ನು ತಿಳಿದು ನಡೆದರೆ ಭವಿಷ್ಯದಲ್ಲಿ ಇತಿಹಾಸವನ್ನು ನಿರ್ಮಿಸಬಹುದು. ದೊಡ್ಡದಾಗಿ ಕನಸು ಕಾಣಿರಿ ಅದರ ಹಿಂದೆ ನಡೆಯಿರಿ. ಈ ವಯಸ್ಸಿನಲ್ಲಿ ಸಾಧಿಸಲಾಗದ್ದು ಯಾವುದು ಇಲ್ಲ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ನಾವು ನಾಯಕತ್ವದ ಗುಣಗಳನ್ನು ರೂಢಿಸಿಕೊಂಡರೆ ದೇಶದ ಸಮರ್ಥ ಪ್ರಜೆಯಾಗಬಹುದು. ವಿಜ್ಞಾನ ಮುಂದುವರೆಯುತ್ತಿದೆ ಸಾಕಷ್ಟು ತಂತ್ರಜ್ಞಾನ ಬೆಳೆಯುತ್ತಿದೆ. ಮಕ್ಕಳಿಗೆ ಕಲಿಯಲು ಉತ್ತಮ ಅವಕಾಶಗಳಿವೆ, ಅದನ್ನು ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಮಾತನಾಡಿ, ಮಕ್ಕಳು ದೇಶದ ಸಂಪತ್ತಾಗಬೇಕು. ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು. ಯಾವುದೇ ಲೋಪದೋಷ ಬರದಂತೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಸಂಘವು ಉತ್ತಮವಾದ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಮತ್ತು ವಿವಿಧ ವಿಭಾಗಗಳಾದ ಅಗ್ನಿ, ವಾಯು, ಜಲ, ಪೃಥ್ವಿ ನಾಮಾಂಕಿತ ದಳಗಳ ಧ್ವಜವನ್ನು ವಿತರಿಸುವ ಮೂಲಕ ನಾಯಕರ ಪದಗ್ರಹಣವು ನಡೆಯಿತು. ವಿದ್ಯಾರ್ಥಿ ನಾಯಕನಾಗಿ ಸುಮಿತ್ ವೈ. ಮತ್ತು ವಿದ್ಯಾರ್ಥಿ ನಾಯಕಿಯಾಗಿ ಸಾಕ್ಷಿ ಹುಬ್ಬಳ್ಳಿ ಪದಗ್ರಹಣ ಮಾಡಿ ನಂತರ ಭಾಷಣವನ್ನು ಮಾಡಿದರು.

ವಿದ್ಯಾರ್ಥಿ ಸಂಘದ ನಾಯಕರುಗಳಿಗೆ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಪ್ರಮಾಣ ವಚನವನ್ನು ಬೋಧಿಸಿದರು ನಂತರ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಐಕ್ಯತಾ ಗೀತೆಯನ್ನು ಹಾಡಿದರು.

ಶಿಕ್ಷಕಿ ಸ್ಮಿಷ್ಮಾ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ವಂದಿಸಿ, ಶಿಕ್ಷಕಿ ಚೇತನ ತಲಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.




















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article