Mangalore: ಸರಕಾರದ ಖರ್ಚಿನಲ್ಲಿ ಶಾಸಕರು ವಿದೇಶ ಪ್ರವಾಸ ಮಾಡುತ್ತಿಲ್ಲ: ಯು.ಟಿ. ಖಾದರ್

Mangalore: ಸರಕಾರದ ಖರ್ಚಿನಲ್ಲಿ ಶಾಸಕರು ವಿದೇಶ ಪ್ರವಾಸ ಮಾಡುತ್ತಿಲ್ಲ: ಯು.ಟಿ. ಖಾದರ್


ಮಂಗಳೂರು: ಸರಕಾರದ ಖರ್ಚಿನಲ್ಲಿ ಯಾವುದೇ ಶಾಸಕರು ವಿದೇಶ ಪ್ರವಾಸ ಮಾಡುತ್ತಿಲ್ಲ. ಸದ್ಯ ಸರಕಾರದ ಖರ್ಚಿನಲ್ಲಿ ವಿದೇಶಕ್ಕೆ ಕಳುಹಿಸಲು ನಿಯಮದಲ್ಲಿ ಅವಕಾಶ ಇಲ್ಲ. ಆದ್ದರಿಂದ ನಾವು ಕಳುಹಿಸುವುದಿಲ್ಲ. ಅವರ ವೈಯುಕ್ತಿಕ ಖರ್ಚಿನಲ್ಲಿ ಯಾರೂ ಕೂಡ ಹೋಗಬಹುದು. ಯಾವತ್ತೂ ಯಾರೂ ಶಾಸಕರನ್ನು ವೈರಿಗಳೆಂದು ಭಾವಿಸದೆ, ಸಹೋದರರು ಹಾಗೂ ಮಿತ್ರರಂತೆ ಕಾಣುವಂತೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು ಮನವಿ ಮಾಡಿದ್ದಾರೆ.

ರಾಜ್ಯದ ವಿವಿಧ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಮತ್ತು ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರ ವಿತರಣೆ ಆಗದೇ ಇದ್ದರೂ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯ ಶಾಸಕರು ಅಧ್ಯಯನದ ಹೆಸರಿನಲ್ಲಿ ವಿದೇಶಗಳಿಗೆ ಪ್ರವಾಸ ಕೈಗೊಳ್ಳಲು ತಯಾರಿ ನಡೆಸಿದ್ದಾರೆ ಎಂದು ಬಂದಿರುವ ಟೀಕೆಗಳ ಬಗ್ಗೆ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಶಾಸಕರ ವಿವಿಧ ಸಮಿತಿ ಅಧ್ಯಯನಕ್ಕೆ ದೇಶದ ವಿವಿಧ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಮಾಡಬಹುದು. ಅಂಥ ರಾಜ್ಯ ಪ್ರವಾಸಗಳಿಗೆ ಮನವಿ ಕೊಟ್ಟಾಗ ಒಪ್ಪಿಗೆ ಕೊಟ್ಟಿದ್ದೇನೆ ಎಂದು ಅವರು ಹೇಳಿದರು.

ಶಾಸಕರು ಪ್ರವಾಸ ಹೋಗುವಾಗ ಎಲ್ಲರಿಗೂ ನೋವು ಬರುತ್ತದೆ. ಆಗಮಾತ್ರ ದೇಶಕ್ಕೆ, ರಾಜ್ಯಕ್ಕೆ ಕಷ್ಟಗಳು ಬರುತ್ತವೆ. ಶಾಸಕರು ಬೆಳಿಗ್ಗಿನಿಂದ ಸಂಜೆ ತನಕ ಜನರ ಮಧ್ಯೆ ಕೆಲಸ ಮಾಡುತ್ತಾರೆ. ಅವರಿಗೂ ಸಮಸ್ಯೆ ಇರುತ್ತದೆ. ಜನಸೇವೆ ಮಾಡುವಾಗ ಸವಲತ್ತು ತಗೋಬಾರದು ಅಂದ್ರೆ ಆಗುತ್ತಾ ಎಂದು ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಅಧಿಕಾರ ಇಲ್ಲದಾಗ ಅವರ ಬಳಿ ಏನೂ ಇರದ ಉದಾಹರಣೆ ಇದೆ. ಹಲವರಿಗೆ ಆಸ್ಪತ್ರೆ ಸೇರಿ ಡಿಸ್ಚಾರ್ಜ್ ಆಗೋಕು ಹಣ ಇರದ ಉದಾಹರಣೆ ಇದೆ ಎಂದು ಅವರು ಎಷ್ಟೋ ಮಾಜಿ ಮಂತ್ರಿಗಳು ಹಾಗೂ ಶಾಸಕರು ಆಸ್ಪತ್ರೆಯಲ್ಲಿ ಹಣ ಇಲ್ಲದೇ ಸಮಸ್ಯೆ ಎದುರಿಸಿದ ಉದಾಹರಣೆಗಳು ಇವೆ. ಮಾಜಿ ಶಾಸಕರು ಜನಸೇವೆ ಮಾಡುವಾಗ ಬಸ್ಸಿನಲ್ಲಿ ಹೋಗಿ ತೀರಿ ಹೋದ ಉದಾಹರಣೆ ಇದೆ. ಶಾಸಕರಿಗೆ ಏನು ಸಿಗುತ್ತದೆ? ಅವರಿಗೆ ಸಿಗುವ ಸಂಬಳ ಡಿಸೇಲ್‌ಗೂ ಸಾಕಾಗಲ್ಲ. ಜೊತೆಯಲ್ಲಿ ಬರೋರಿಗೆ ಕಾಫಿ ತೆಗೆದುಕೊಡೋಕು ಸಾಕಾಗಲ್ಲ. ಶಾಸಕರ ಮನೆಗೆ ಮಗಳ ಮದುವೆ, ಮಕ್ಕಳ ಫೀಸ್ ಅಂತ ಬರ್ತಾರೆ ಎಂದು ಅವರು ಶಾಸಕರ ಸಮಸ್ಯೆಗಳನ್ನು ಪಟ್ಟಿ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article