
Mangalore: ಭಾರತ್ ಮಾತಾಕೀ ಜೈ ಘೋಷಣೆ ಕೂಗಿದ ಮುಡಿಪು ಹಿಂದೂ ಕಾರ್ಯಕರ್ತರನ್ನು ಚೂರಿ ಇರಿದು ಹತ್ಯೆಗೆ ಯತ್ನ-ವಿಹೆಚ್‌ಪಿ, ಬಜರಂಗದಳ ಖಂಡನೆ
Monday, June 10, 2024
ಮಂಗಳೂರು: ಪ್ರಧಾನಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಜಯೋತ್ಸವ ವೇಳೆ ಭಾರತ್ ಮಾತಾಕೀ ಜೈ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರಾದ ಹರೀಶ್ (40) ಹಾಗೂ ನಂದಕುಮಾರ್ ಮೇಲೆ ಸುಮಾರು 20 ರಿಂದ 25 ಮಂದಿಯ ಗುಂಪೊಂದು ಹಲ್ಲೆ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದು ಹತ್ಯೆ ಮಾಡುವ ಯತ್ನ ಕಳೆದ ರಾತ್ರಿ ನಗರದ ಮುಡಿಪು ಸಮೀಪದ ಬೋಳಿಯಾರ್‌ನಲ್ಲಿ ನಡೆದಿದ್ದು, ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಲವಾಗಿ ಖಂಡಿಸುತ್ತದೆ.
ಈ ಕೃತ್ಯ ನಡೆಸಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಳ್ಳಬೇಕು, ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಧೋರಣೆ ಮತ್ತು ಮುಸ್ಲಿಮರ ಓಲೈಕೆಯಿಂದ ಇಂತಹ ಘಟನೆಗಳು ನಡೆಯುತ್ತಿದ್ದು ತಕ್ಷಣ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಹಾಗೂ ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ ಆಗ್ರಹಿಸಿದರು.