Mangalore: ನೀಟ್ ಫಲಿತಾಂಶ-ಎಕ್ಸ್‌ಪರ್ಟ್‌ನ ಅರ್ಜುನ್ ಕಿಶೋರ್‌ಗೆ ಪ್ರಥಮ ರ‍್ಯಾಂಕ್
Wednesday, June 5, 2024
ಮಂಗಳೂರು: ನೀಟ್ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್ 720ರಲ್ಲಿ 720 ಅಂಕಗ ಳೊಂದಿಗೆ ದೇಶ, ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು ಕೊಂಡಿದ್ದಾರೆ.
ಮೈಸೂರು ಮೂಲದ ಅರ್ಜುನ್ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ.
ನಿರಂತರ ಪ್ರಯತ್ನ ಹಾಗೂ ಕಠಿನಪರಿಶ್ರಮದಿಂದ ಈ ಸಾಧನೆ ಸಾಧ್ಯ ವಾಯಿತು. ಎಕ್ಸ್‌ಪರ್ಟ್ ಕಾಲೇಜಿನ ಬೋಧಕ ವೃಂದ, ಪೋಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಮುಂದೆ ಸರ್ಜನ್ ಆಗುವ ಅಭಿಲಾಶೆಯಿದೆ ಎಂದು ಅರ್ಜುನ್ ಹೇಳಿದ್ದಾರೆ.
ರ್ಜುನ್ ತಂದೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿಶೋರ್ ಮತ್ತು ಸ್ತ್ರೀರೋಗ ತಜ್ಞೆ ಡಾ. ರಶ್ಮಿ ಅವರ ಪುತ್ರ ಅರ್ಜುನ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99.8 ಅಂಕ ಗಳಿಸಿದ್ದರು.
‘ಕಠಿಣ ಪರಿಶ್ರಮವೇ ಯಶಸ್ಸು ಎಂಬುದು ಎಕ್ಸ್‌ಪರ್ಟ್ ಕಾಲೇಜಿನ ಧ್ಯೇಯವಾಕ್ಯವಾಗಿದ್ದು, ಪರಿಶ್ರಮವಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ವಿದ್ಯಾರ್ಥಿಯ ಶ್ರಮ, ಪಾಲಕರು, ಉಪನ್ಯಾಸಕರು, ಕಾಲೇಜಿನ ವಾತಾವರಣದಿಂದ ಇದು ಸಾಧ್ಯವಾಗಿದೆ’ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದ್ದಾರೆ.



