Mangalore: ಮಂಗಳೂರು ವಿ.ವಿ. ಘಟಿಕೋತ್ಸವದಲ್ಲಿ ರಾಜ್ಯಪಾಲರದದ್ದೇ ರಾಜ್ಯದರ್ಬಾರ್

Mangalore: ಮಂಗಳೂರು ವಿ.ವಿ. ಘಟಿಕೋತ್ಸವದಲ್ಲಿ ರಾಜ್ಯಪಾಲರದದ್ದೇ ರಾಜ್ಯದರ್ಬಾರ್


ಮಂಗಳೂರು: ಸುಜಜ್ಜಿತ ಮಂಗಳ ಸಭಾಂಗಣದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಡೀ ಕಾರ್ಯಕ್ರಮದಲ್ಲಿ ಅವರದ್ದೇ ರಾಜ್ಯ ದರ್ಬಾರಿನಂತಿತ್ತು.

ಘಟಿಕೋತ್ಸವ ಪೂರ್ವಶಿಷ್ಠಾಚಾರದಂತೆ ನಡೆಸಲು ಮಂಗಳೂರು ವಿವಿ ಎಲ್ಲಾ ಅಧಿಕಾರಿಗಳು ಪೂರ್ವಸಿದ್ದತೆ ನಡೆಸಿದ್ದರು. ಆದರೆ ರಾಜ್ಯಪಾಲರು ವೇದಿಕೆಯಲ್ಲೇ ಕೂತು ಏರುಧ್ವನಿಯಲ್ಲೇ ತಮಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮದ ಶಿಷ್ಠಾಚಾರವನ್ನು ಬದಲು ಮಾಡಲು ನಿರ್ದೇಶಿಸುತ್ತಿದ್ದರು.

ಘಟಿಕೋತ್ಸವದ ಕೊನೆಯಲ್ಲಿ ಹಾಡಬೇಕಿದ್ದ ರಾಷ್ಟ್ರಗೀತೆಯನ್ನು ಆರಂಭದಲ್ಲೇ ಹಾಡಲು ಸೂಚಿಸಿದರು. ಒಂದುವರೆ ಗಂಟೆಯ ಇಡೀ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ವಿವಿಯ ಉಪ ಕುಲಪತಿ, ಪರೀಕ್ಷಾಂಗ ಕುಲಸಚಿವರಿಗೆ ಬಾಯಿಗೆ ಬಂದಂತೆ ಮೌಕಿಕ ನಿರ್ದೇಶನ ನೀಡುತ್ತಿದ್ದರು. ಪಿ.ಎಚ್.ಡಿ. ಪದವಿಯನ್ನು ರಾಜ್ಯಪಾಲರ ಕೈಯಿಂದಲೇ ನೀಡುವುದು ಶಿಷ್ಠಾಚಾರ, ಆದರೆ ಈ ಬಾರಿ ಸಂಶೋಧನಾರ್ಥಿಗಳಿಗೆ ಪಿ.ಎಚ್.ಡಿ. ಸರ್ಟಿಫಿಕೇಟ್‌ನ್ನು ಕಾರ್ಯಕ್ರಮದ ಮೊದಲೇ ಹಂಚಿ ನಂತರ ಎಲ್ಲರನ್ನೂ ಒಟ್ಟಿಗೆ ವೇದಿಕೆಗೆ ಕರೆದು ರಾಜ್ಯಪಾಲರು ಗ್ರೂಪ್ ಪೊಟೋಗೆ ಫೋಸ್ ನೀಡಿದ್ದಾರೆ. 

ಈ ಮಧ್ಯೆ ರಾಜ್ಯಪಾಲರ ಅಂಗರಕ್ಷಕರಾಗಿದ್ದ ಬೆಂಗಳೂರಿನ ಹೆಡ್‌ಕಾಸ್ಟೇಬಲ್ ವೇದಿಕೆಯಲ್ಲಿ ನಿಂತು ಏರುದನಿಯಲ್ಲೇ ವಿವಿ ಸಿಬ್ಬಂದಿಗಳತ್ತ ಮಾತು, ಮಾಧ್ಯಮದ ಕ್ಯಾಮರಾಮೆನ್ ಒಬ್ಬರನ್ನು ದೂಡಿದ ಘಟನೆಯೂ ನಡೆಯಿತು. ಇಡೀ ಘಟನೆ ಬಗ್ಗೆ ವಿವಿ ಅಧಿಕಾರಿಗಳು ಮೌನವಾಗಿ ಪ್ರತಿಕ್ರೀಯಿಸುತ್ತಿದ್ದರೆ, ಕುಲಪತಿ ಡಾ. ಪಿ.ಎಲ್. ಧರ್ಮ ವೇದಿಕೆಯಲ್ಲೇ ದು:ಖದಿಂದ ಅಳುವ ಸ್ಥಿತಿಯಲ್ಲಿದ್ದರು. ಇಡೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು ಸಭೆಯುದ್ದಕ್ಕೂ ಒಂದು ನಿಮಿಷವೂ ಮಾತನಾಡದೆ ಸುಮ್ಮನೆ ಕುಳಿತಿರದ ಬಗ್ಗೆ ಸಬಾಂಗಣದಲ್ಲಿದ್ದ ಹಲವರು ಆಕ್ರೋಷ ವ್ಯಕ್ತಪಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article