Mangalore: ಪಾಕಿಸ್ತಾನಿ..., ಬಳಕೆ ಸಮರ್ಥನೆ, ಘೋಷಣೆ ಪೂರ್ವ ತಯಾರಿಯೇ?-ಸಿ.ಟಿ. ರವಿ ಉತ್ತರಿಸಲಿ: ಕೆ.ಅಶ್ರಫ್

Mangalore: ಪಾಕಿಸ್ತಾನಿ..., ಬಳಕೆ ಸಮರ್ಥನೆ, ಘೋಷಣೆ ಪೂರ್ವ ತಯಾರಿಯೇ?-ಸಿ.ಟಿ. ರವಿ ಉತ್ತರಿಸಲಿ: ಕೆ.ಅಶ್ರಫ್


ಮಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಇತ್ತೀಚೆಗಿನ ಬೋಳಿಯಾರು ಸಂಭ್ರಮಾಚರಣೆ ವೇಳೆಯಲ್ಲಿನ ಬಿಜೆಪಿ ಕಾರ್ಯಕರ್ತರ ಪಾಕಿಸ್ತಾನಿಗಳೇ ಘೋಷಣೆ ನೈಜ ಭಾರತೀಯರನ್ನು ಬೇಸರಗೊಳಿಸಿಲ್ಲ ಎಂದು ಸಮರ್ಥಿಸಿ ಕೊಂಡಿದ್ದಾರೆ ಎಂದು ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ಸಿ.ಟಿ. ರವಿ ಅವರನ್ನು ಪ್ರಶ್ನಿಸಿದ್ದಾರೆ.

ಪತ್ರಿಕಾ ಗೋಷ್ಠಿ ನಡೆಸಿದ ಸಿ.ಟಿ. ರವಿ ಅವರು ನಗರ ಪೊಲೀಸ್ ಆಯುಕ್ತರ ಹೇಳಿಕೆಯನ್ನು ಕೂಡಾ ವಿಮರ್ಶಿಸಿ, ಪೊಲೀಸ್ ಆಯುಕ್ತರ ಹೇಳಿಕೆ, ಇರಿತಕ್ಕೆ ಕಾರಣ ಪ್ರಚೋದನಾತ್ಮಕ ಘೋಷಣೆ ಎಂಬುದನ್ನು ವಿಮರ್ಶೆಸಿದ್ದಾರೆ. ಸಿ.ಟಿ. ರವಿ ಅವರು ಹೇಳಲಿ, ವಿಜಯೋತ್ಸವದ ಸಂಧರ್ಭದಲ್ಲಿ ಪ್ರಾರ್ಥನಾಲಯದ ಎದುರಿಗೆ ಪಾಕಿಸ್ತಾನಿ.... ಪದಬಳಕೆಗೆ ತಾವು ತಮ್ಮ ಪಕ್ಷದ ಕಾರ್ಯಕರ್ತರಿಗೆ ಪೂರ್ವ ತರಬೇತಿ ನೀಡಿದ್ದರ ಪರಿಣಾಮವೇ?. 

ಹಾಗಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಗಲಭೆ ಸೃಷ್ಟಿಸುವ ಹುನ್ನಾರದಿಂದಲೇ, ಅನುಮತಿ ರಹಿತ ಸಂಭ್ರಮಾಚರಣೆ ಮೆರವಣಿಗೆ ನಡೆಸಿದ್ದಾರೆಯೇ? ಎಂದು ಹೇಳಲಿ. ಸಿ.ಟಿ. ರವಿಯವರು ಈ ಹಿಂದಿನ ಸಂಸದರು ಪ್ರಯತ್ನಿಸಿದಂತೆ ಜಿಲ್ಲೆಯಲ್ಲಿ ಬೆಂಕಿ ಗಲಭೆಗೆ ತಯಾರಿ ನಡೆಸಿದ್ದರೆ ಎಂದು ಕೂಡಾ ಹೇಳಲಿ. ಶಾಸಕ ಹರೀಶ್ ಪೂಂಜಾರಿಗೆ ತಲವಾರು ಪದ ಬಾಯಿ ಪಾಠ ಇದ್ದರೆ, ಸಿ.ಟಿ. ರವಿಗೆ ಪಾಕಿಸ್ತಾನ ಪದ ಬಾಯಿ ಪಾಠ ಇದ್ದೇ ಇದೆ!. ಅದನ್ನು ಇಂದು ಓದರಿದ್ದಾರೆ. 

ಜಿಲ್ಲೆಯ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇದೆ ಎಂದು ಹೇಳಿಕೆ ನೀಡುವ ಬಿಜೆಪಿ ನಾಯಕರು ಜಿಲ್ಲೆಯಲ್ಲಿ ವಿವಿಧ ಜಾತಿಗಳ ಮದ್ಯೆ ಕಲಹ ಸೃಷ್ಟಿಸುವ ಪ್ರಯತ್ನವನ್ನು ಇನ್ನಾದರೂ ಕೈ ಬಿಡಲಿ. ಜಿಲ್ಲೆಯ ಬಿಜೆಪಿ ನಾಯಕರು ಅರಿಯಲಿ, ದೇಶದ ಯಾವ ಮಸೀದಿಯಲ್ಲಿ ಶಸ್ತ್ರಾಸ್ತ್ರವೂ ಇಲ್ಲ, ಜನರನ್ನು ಭೇದಗೊಳಿಸುವ ಧಾರ್ಮಿಕ ಮೀಸಲಾತಿಯು ಇಲ್ಲ, ಇಂತಹ ಮೀಸಲಾತಿ ಇತರ ಧರ್ಮದಲ್ಲಿ ಅಸ್ತಿತ್ವದಲ್ಲಿ ಇದ್ದರೆ ಸಿ.ಟಿ. ರವಿಯವರು ಇಂದೇ ಅಂತಹ ಭೇದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಲಿ. ಹರೀಶ್ ಪೂಂಜಾರನ್ನು ಈ ಹಿಂದೆ ಪಲ್ಲಕ್ಕಿ ಸ್ಪರ್ಷಿಸಿದ್ದಕ್ಕಾಗಿ ಹೊರಗೆ ಇಟ್ಟ ವ್ಯವಸ್ಥೆ ಮಸೀದಿ ಅಲ್ಲ ಎಂಬುದನ್ನು ಮರೆಯದಿರಲಿ ಎಂದು ಕೆ. ಅಶ್ರಫ್ ಪ್ರಕಟಣೆಯಲ್ಲಿ ನೆನಪಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article