Mangalore:  ‘ಸ್ಪೀಕರ್ ಆಗಿ ಮುಂದುವರಿಯಲಿದ್ದೇನೆಯೇ ಗೊತ್ತಿಲ್ಲ’: ಯು.ಟಿ. ಖಾದರ್

Mangalore: ‘ಸ್ಪೀಕರ್ ಆಗಿ ಮುಂದುವರಿಯಲಿದ್ದೇನೆಯೇ ಗೊತ್ತಿಲ್ಲ’: ಯು.ಟಿ. ಖಾದರ್


ಮಂಗಳೂರು: ‘ವಿಧಾನಸಭೆ ಸ್ಪೀಕರ್ ಆಗಿ ಐದು ವರ್ಷಗಳ ಕಾಲ ಮುಂದುವರಿಯಲಿದ್ದೇನೆಯೇ ಎಂಬುದು ನನಗೆ ಗೊತ್ತಿಲ್ಲ. ಹಣೆಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಗೊತ್ತಿಲ್ಲ. ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಇಂದು ಸಚಿವರಾಗುವ ಸಾಧ್ಯತೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,  ನಮಗೆ ದೊರಕುವ ಸ್ಥಾನಮಾನ ಆಶೀರ್ವಾದಕ್ಕಿಂತಲೂ ಹೆಚ್ಚಿನದ್ದು ಎಂಬ ಭಾವನೆ ಇತ್ತು.

ಆದರೆ, ಆಶೀರ್ವಾದವೇ ಮುಖ್ಯ ಎಂಬುದು ನನಗೀಗ ಮನವರಿಕೆ ಆಗಿದೆ. ಶಾಸಕ, ಮಂತ್ರಿ, ಸ್ಪೀಕರ್ ಯಾವುದೇ ಸ್ಥಾನದಲ್ಲಿಯೂ, ಸ್ಥಾನ ಇಲ್ಲದೆಯೂ ನಾನು ಖುಷಿಯಾಗಿರುತ್ತೇನೆ. ನನಗೆ ಸ್ಥಾನ ಮುಖ್ಯವಲ್ಲ, ನಾವು ಕೆಲಸ ಮಾಡುವುದು ಮುಖ್ಯ. ನನಗೆ ಅಧಿಕಾರ ಶಾಶ್ವತ ಅಲ್ಲ ಎಂಬ ಅರಿವಿದೆ ಎಂದರು.

ಜಿಲ್ಲೆಯಲ್ಲಿ ಜೂಜಾಟ, ಮಸಾಜ್ ಪಾರ್ಲರ್ಗಳು, ವೀಡಿಯೋ ಗೇಮ್, ಅಕ್ರಮ ಮರಳು ದಂಧೆ ಹೆಚ್ಚಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 2018 ರಿಂದ 20ರ ಅವಧಿಯಲ್ಲಿ ಉಸ್ತುವಾರಿ ಸಚಿವನಾಗಿದ್ದಾಗ ಈ ಎಲ್ಲವನ್ನೂ ಬಂದ್ ಮಾಡಿಸಿದ್ದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಲ್ಲವೂ ಮತ್ತೆ ತೆರೆಯಿತು. ಸ್ಯಾಂಡ್ ಬಜಾರ್ ಆಪ್ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲಾಗಿತ್ತು. ಮತ್ತೆ ಅದು ಬಂದ್ ಆಯಿತು. ಜಿಲ್ಲೆಯ ಇತರ ಸ್ಥಳೀಯ ಶಾಸಕರು ಯಾರೂ ಮಾತನಾಡುತ್ತಿಲ್ಲ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಲೂ ಯಾವುದೇ ಸ್ಕಿಲ್ ಗೇಮ್, ಕ್ಲಬ್ ತೆರೆಯಲು ಅವಕಾಶ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಒಬ್ಬರು ರಿಕ್ರಿಯೇಶನ್ ಕ್ಲಬ್‌ಗಾಗಿ  ಹೈಕೋರ್ಟ್‌ನಿಂದ ಆದೇಶ ತಂದರು. ಅಲ್ಲಿ 24 ಗಂಟೆಯೂ ಪೊಲೀಸ್ ಜೀಪ್ ಇರುವಂತೆ ಮಾಡಿದೆ. ಒಂದು ವಾರದಲ್ಲಿ ಬಂದ್ ಆಯಿತು. ಇಂತಹ ಅಕ್ರಮಗಳನ್ನು ತಡೆಯುವುದು ಸ್ಥಳೀಯ ಶಾಸಕರ ಜವಾಬ್ದಾರಿ ಎಂದು ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯಿಸಿದರು.

ಶಾಸಕರು ಅನುದಾನ ಬಾರಿದಿದ್ದರೆ ಅದನ್ನುಮುಖ್ಯಮಂತ್ರಿಗಳಿಗೆ ತಿಳಿಸಬೇಕು. ವಿಪಕ್ಷದ ಯಾವ ಶಾಸಕರೂ ಅನುದಾನ ಬಂದಿಲ್ಲ ಎಂದು ನನ್ನ ಬಳಿ ಹೇಳಿಲ್ಲ. ಹೇಳಿದರೆ ಮುಖ್ಯಮಂತ್ರಿಗೆ ತಿಳಿಸುವ ಕೆಲಸ ಮಾಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕ ವಿಧಾನಸಭಾ ಅಧಿವೇಶವನ್ನು ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸುವ ಇರಾದೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article