Mangalore: ಹೋಮಿಯೋಪತಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕು: ಯು.ಟಿ. ಖಾದರ್

Mangalore: ಹೋಮಿಯೋಪತಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕು: ಯು.ಟಿ. ಖಾದರ್


ಮಂಗಳೂರು: ಈಗಿನ ಸಮಾಜದಲ್ಲಿ ಬೇರೆ ಬೇರೆ ರೀತಿಯ ಆಸ್ಪತ್ರೆಗಳಿಗೆ ತೆರಳಿ ಹಣವನ್ನೆಲ್ಲ ಖಾಲಿ ಮಾಡಿಕೊಂಡ ನಂತರ ಹೋಮಿಯೋಪತಿ, ಆಯುರ್ವೆಧ ಆಸ್ಪತ್ರೆಗಳಿಗೆ ಜನರು ಬರುತ್ತಾರೆ ಅದು ಬದಲಾಗಿ ಸಮಾಜದಲ್ಲಿ ಹೋಮಿಯೋಪತಿಯ ಸ್ಥಾನ ಏನು ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅವರು ಜೂ.30 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಐಹೆಚ್‌ಎಂಎ ವತಿಯಿಂದ ಆಯೋಜಿಸಿದ ‘ಕುಡ್ಲ ಹೋಮಿಯೊಕಾನ್-24’ ರಾಷ್ಟ್ರೀಯ ಸಮಾವೇಶ ಮತ್ತು ವೈಜ್ಙಾನಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿ ಮೊದಲು ಯಾರೂ ಆಲಿಯೋಪತಿ ಚಿಕಿತ್ಸೆಗೆ ಹೋಗುತ್ತಿರಲಿಲ್ಲ ಪ್ರತಿಯೊಬ್ಬರೂ ಹೋಮಿಯೋಪತಿ, ಆಯುರ್ವೇಧ ಚಿಕಿತ್ಸೆಗೆ ತೆರಳುತ್ತಿದ್ದರು. ಆದರೆ ಕಾಲ ಬದಲಾದಂತೆ ಹೋಮಿಯೋಪತಿ ಚಿಕಿತ್ಸೆಯ ಒಲವು ಕಡಿಮೆಯಾಗಿ ಅಲೋಪತಿ ಚಿಕಿತ್ಸೆಯತ್ತ ಒಲವು ಹೆಚ್ಚಾಗುವಂತಾಗಿದೆ. ಆದರೆ ಹೋಮಿಯೋಪತಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೋಮಿಯೋಪತಿಯ ಚಿಕಿತ್ಸೆಯನ್ನೇ ನೀಡಿ. ತಾವು ಹೋಮಿಯೋಪತಿ ಅಭ್ಯಾಸಿಸಿ ಆಲೋಪತಿ ಚಿಕಿತ್ಸೆಯನ್ನು ನೀಡಿದರೆ ಹೋಮಿಯೋಪತಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹೋಮಿಯೋಪತಿ ಪ್ರೋತಾಹಕ್ಕಾಗಿ ನಾನು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ೫೦ ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ತೆರೆದಿದ್ದು, ಈಗ ಜಿಲ್ಲಾ ಮಟ್ಟದಲ್ಲಿ ವೈದ್ಯರ ಕೊರತೆ ಇದ್ದು ಅದನ್ನು ಶೀಘ್ರವಾಗಿ ನಿವಾರಿಸುವ ಭರವಸೆಯನ್ನು ನೀಡಿದರು.

ನೀವು ಈಗ ರಾಷ್ಟ್ರ ಮಟ್ಟದ ಸಮಾವೇಶ ನಡೆಸುತ್ತಿದ್ದು, ಅದರಲ್ಲಿ ಅಜೇಂಡಾವನ್ನು ಮಂಡಿಸಿ ಅದರ ವರದಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿ ನಾನು ಅದನ್ನು ಮಂತ್ರಿಗಳಲ್ಲಿ ಮಾತನಾಡಿ, ಹೋಮಿಯೋಪತಿ ಚಿಕಿತ್ಸೆಗೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಖಾದರ್ ತಿಳಿಸಿದರು.

ಫಾದರ್ ಮುಲ್ಲಾರ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕ, ಆಡಳಿತಾಧಿಕಾರಿ ಫಾ. ಫಾಸ್ಟೀನ್ ಎಲ್. ಲೋಬೋ ಮಾತನಾಡಿ, ನಾವು ಕಲಿತ ವಿದ್ಯೆಯನ್ನು ಎಷ್ಟು ಅಭ್ಯಾಸ ಮಾಡುತ್ತೇವೆ ಅಷ್ಟು ಅದರಲ್ಲಿ ಶೇಷ್ಠ ವ್ಯಕ್ತಿಯಾಗಲು ಸಾಧ್ಯ. ನಾವು ಕೇವಲ ಪಠ್ಯವನ್ನು ಓದಿರುತ್ತೇವೆ ಅದನ್ನು ನಾವು ಪ್ರಾಯೋಗಿಕವಾಗಿ ಅಭ್ಯಾಸಿಸಿದಾಗ ಉತ್ತಮ ವೈದ್ಯನಾಗಲು ಸಾಧ್ಯ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವು ಕಲಿತದ್ದನ್ನು ಮೊದಲು ಅಭ್ಯಾಸಿಸಬೇಕು. ಅದರೊಂದಿಗೆ ನಾವು ನಡೆಸುವಂತಹ ಇಂತಹ ಸಮಾವೇಶಗಳು ಒಂದು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯ ಮುಂದುವರೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಹೆಚ್‌ಎಂಎಯ ರಾಷ್ಟ್ರೀಯ ಅಧ್ಯಕ್ಷ ಡಾ. ಉವೈಸೆ ಕೆ.ಎಂ. ವಹಿಸಿ ಮಾತನಾಡಿದರು.

ರಾಜ್ಯದ ಆಯುಷ್ ಇಲಾಖೆಯ ಉಪ ನಿರ್ದೇಶಕ ಡಾ. ಅಶ್ವಥ್ ನಾರಾಯಣ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಲ್, ಐಹೆಚ್‌ಎಂಎಯ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಡಾ. ಧೀರಾಜ್ ಸ್ಯಾಮ್ಯುಯೆಲ್, ರಾಜ್ಯ ಐಹೆಚ್‌ಎಂಎಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಮ್ಮೇಳನದ ನಿರ್ದೇಶಕ ಡಾ. ಪ್ರವೀಣ್ ಕುಮಾರ್ ರೈ, ಐಹೆಚ್‌ಎಂಎಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಮ್ಮೇಳನದ ಸಂಚಾಲಕ ಡಾ. ಅವಿನಾಶ್ ವಿ.ಎಸ್. ಉಪಸ್ಥಿತರಿದ್ದರು. ರಾಜ್ಯ ಐಹೆಚ್‌ಎಂಎಯ ಅಧ್ಯಕ್ಷ ಹಾಗೂ ಸಮ್ಮೇಳನದ ಅಧ್ಯಕ್ಷ ಡಾ. ಪ್ರವೀಣ್ ರಾಜ್ ಆಳ್ವ ಸ್ವಾಗತಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article