
Bangalore: ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿ ನಿಧನ
Sunday, June 30, 2024
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ(46) ಅವರು ಇಂದು ನಿಧನರಾಗಿದ್ದಾರೆ.
ಹಂಸಾ ಮೊಯ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ನಿಧನರಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಹಂಸಾ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಹಾಗೂ ಪ್ರಾಯೋಗಿ ನೃತ್ಯ ಸಂಯೋಜಿಕಿಯಾಗಿ ಖ್ಯಾತಿಯನ್ನು ಪಡೆದಿದ್ದರು. ಇದಲ್ಲದೇ ದೇವದಾಸಿಯರ ಜೀವನವನ್ನು ಆಧಿರಿಸಿದ ತಮಿಳಿನ ಖ್ಯಾತ ಚಲನಚಿತ್ರ ಶೃಂಗಾರಂನಲ್ಲಿ ಕೂಡ ಅಭಿನಯಿಸಿ ನಟಿ ಅಂತನೂ ಕರೆಸಿಕೊಂಡಿದ್ದರು.
ಪುತ್ರಿಯ ನಿಧನದ ಸುದ್ದಿ ತಿಳಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ.