
Mangalore: ರಸ್ತೆಯ ಮೇಲೆ ಹರಿಯುತ್ತಿರುವ ತ್ಯಾಜ್ಯ ನೀರು
Monday, June 24, 2024
ಮಂಗಳೂರು: ಮಂಗಳೂರು ಹಳೆಬಂದರು ಗೋಳಿಕಟ್ಟೆ ವೃತ್ತದ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡ ರಸ್ತೆಯ ಮೇಲೆ ಕಳೆದೊಂದು ದಿನದಿಂದ ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕಡೆ ಗಮನ ಹರಿಸದ ಕಾರಣ ಜನ ನಡೆದಾಡಲು ಅಸಾಧ್ಯವಾಗಿದೆ ಎಂದು ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಬರಿಗಾಲಲ್ಲೇ ಕೆಲಸ ಮಾಡುವ ಹಮಾಲಿ ಕಾರ್ಮಿಕರು ಡೆಂಗ್ಯೂ ಮಲೇರಿಯಾ ರೋಗಗಳಿಗೆ ಬಲಿಯಾಗುವ ಭೀತಿ ಇದೆ. ಸ್ಮಾರ್ಟ್ ಸಿಟಿ ಎಂದು ಜಂಭ ಕೊಚ್ಚಿಕೊಳ್ಳುವ ಶಾಸಕರು, ಪಾಲಿಕೆಯ ಆಡಳಿತ ಈ ಬಗ್ಗೆ ಗಮನ ಹರಿಸದಿರುವುದು ಖಂಡನೀಯ ಸ್ಮಾರ್ಟ್ ಸಿಟಿ ಕಾಮಗಾರಿಗಳು ಭ್ರಷ್ಟಾಚಾರ ಮತ್ತು ಅವೈಜ್ಞಾನಿಕವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಹೇಳುತ್ತಿದೆ ಎಂದು ಬಿ.ಕೆ. ಇಮ್ತಿಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.