
Manjeswar: ಸಂಸದ ಬಾಲಕೃಷ್ಣನ್ ಪೆರಿಯಾ ಅವರ ಸಂಸದರ ನಿಧಿ ಬಳಕೆ ಕುರಿತು ಸಮಗ್ರ ತನಿಖೆಯಾಗಬೇಕು: ಅಶ್ವಿನಿ ಎಂ.ಎಲ್.
Friday, June 28, 2024
ಮಂಜೇಶ್ವರ: ಮಾಜಿ ಕೆ.ಪಿ.ಸಿ.ಸಿ. ಸದಸ್ಯ ಹಾಗೂ ಪ್ರಮುಖ ಕಾಂಗ್ರೆಸ್ ಮುಖಂಡ ಬಾಲಕೃಷ್ಣನ್ ಪೆರಿಯಾ ಅವರು ಸಂಸದರ ನಿಧಿ ಬಳಸಿ ಹೈಮಾಸ್ಟ್ ಲೈಟ್ ಸ್ಥಾಪನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆರೋಪಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ಉತ್ತಮ ಬೆಳವಣಿಗೆ ಎಂದು ರಾಜ್‌ಮೋಹನ್ ಉನ್ನಿತಾನ್ ಅವರು ಚುನಾವಣಾ ಸಂದರ್ಭದಲ್ಲಿ ಮತ್ತು ಚುನಾವಣಾ ಪೂರ್ವದಲ್ಲಿ ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಅವರ ಹೈಮಾಸ್ಟ್ ಪ್ರೀತಿಯ ಹಿಂದೆ ಭ್ರಷ್ಟಾಚಾರದ ಹಣವಿದೆ ಎಂದು ಅವರ ಸಹೋದ್ಯೋಗಿಗಳು ಆರೋಪಿಸುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ, ಸಂಸದರ ನಿಧಿ ದುರ್ಬಳಕೆ, ಅಕ್ರಮ, ಭ್ರಷ್ಟಾಚಾರ ಸಹಿಸುವುದಿಲ್ಲ. ಸಂಸದರ ನಿಧಿ ಪಡೆದಿರುವ ಎಲ್ಲ ಯೋಜನೆಗಳ ಕುರಿತು ವಿಸ್ತೃತ ತನಿಖೆಯಾಗಬೇಕು ಎಂದು ಅಶ್ವಿನಿ ಎಂ.ಎಲ್. ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.