Moodubidire: ಪರಿಸರ ಎಂದರೆ ಭಾವನೆಗಳ ಸಾಗರ-ಆಸ್ಮಾಬಾನು ಅಭಿಮತ

Moodubidire: ಪರಿಸರ ಎಂದರೆ ಭಾವನೆಗಳ ಸಾಗರ-ಆಸ್ಮಾಬಾನು ಅಭಿಮತ


ಮೂಡುಬಿದಿರೆ: ಪರಿಸರ ಎಂದರೆ ಅದೊಂದು ವಿಚಾರ, ಭಾವನೆಗಳ ಸಾಗರವಾಗಿದೆ. ಹಿಂದೆ ಅನ್ನವೇ ಪರಬ್ರಹ್ಮವಾಗಿತ್ತು. ಅನ್ನ ಸೇವಿಸುತ್ತಿದ್ದರಿಂದ ಮಕ್ಕಳು ಆರೋಗ್ಯಯುತವಾಗಿ ಬೆಳೆಯುತ್ತಿದ್ದರು. ಆದರೆ ಇಂದು ನಾವು ಸೇವಿಸುತ್ತಿರುವ ಅನ್ನವೂ ಕೂಡಾ ರಾಸಾಯನಿಕವಾಗಿದೆ ಎಂದು 840 ಭತ್ತದ ತಳಿಗಳನ್ನು ಸಂಗ್ರಹಿಸಿ ಬೆಳೆಸುತ್ತಿರುವ ಸಾಧಕಿ ಆಸ್ಮಬಾನು ಹೇಳಿದರು. 

ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಮ್ಮ 'ಉಳಿವಿಗಾಗಿ ಅರಿವು' ಎಂಬ ಆಶಯದಲ್ಲಿ ವಿವಿಧ ಬಗೆಯ ಅಳಿವಿನ ಅಂಚಿನಲ್ಲಿರುವ ಭತ್ತದ ತಳಿಗಳ ಬಗ್ಗೆ ಅವುಗಳನ್ನು ಕಾಪಡಿಕೊಳ್ಳುವ ಬಗ್ಗೆ ಹಾಗೂ ಅವುಗಳ ಉಪಯೋಗವನ್ನು ತಿಳಿಸಿಕೊಡುವ ಹಾಗೂ  ಪೋಷಕರಿಗೆ ಗಿಡ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದಿನ ಆಧುನಿಕ ಆಹಾರ ಪದ್ಧತಿಗಳಿಂದ ಹಲವಾರು ರೋಗಗಳಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ.  ಆದ್ದರಿಂದ ನಾವು ಸಾವಯವ ಕೃಷಿಯತ್ತ ಗಮನ ಹರಿಸಬೇಕಾಗಿದೆ. ದೇಶಿಯ ಭತ್ತದ ತಳಿಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆ ಆರೋಗ್ಯಯುತವಾಗಿರುತ್ತದೆ.

ಪ್ರಕೃತಿಯಲ್ಲಿ ಬೇರೆ ಬೇರೆ ರೀತಿಯ ಪಕ್ಷಿ ಸಂಕುಲ ನೆಲೆಸಿತ್ತು. ಮನುಷ್ಯನ ಋಣಾತ್ಮಕ ಅಭಿವೃದ್ಧಿಯ ಚಿಂತನೆಯಲ್ಲಿ ಆ ಪಕ್ಷಿ ಸಂಕುಲವನ್ನು ನಾವು ಇಂದು ಕಳೆದುಕೊಂಡಿದ್ದೇವೆ ಎಂದರು.    ಇಂದಿನ ಮನುಷ್ಯರು ನಾಲಗೆಯ ರುಚಿಗೆ ಮಾರು ಹೋಗುತ್ತಿದ್ದಾರೆ. ದೇಶಿಯ ತಳಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಲನ್ನು ಕೊಡುವುದು ಭತ್ತದ ಗುಣವಾಗಿದೆ. ಅದು ಪಾಲ್ಕುಡ ಭತ್ತ, ಆರ್ಯುವೇದ ಚಿಕಿತ್ಸೆಯಲ್ಲಿ ಹೆಚ್ಚು ಅಕ್ಕಿ ವಿವಿಧ ರೀತಿಯ ಅಕ್ಕಿಯನ್ನು ಬಳಸುತ್ತಾರೆ. ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ಗುಣ ನಮ್ಮ ದೇಶಿಯ ಭತ್ತದ ತಳಿಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡುವುದು ತುಂಬಾ ಮುಖ್ಯವಾಗಿದೆ. ಈ ತಿಳಿವಳಿಕೆಯನ್ನು ಇಂದಿನ ಮಕ್ಕಳಲ್ಲಿ ಮೂಡಿಸಬೇಕಾಗಿದೆ, ಎಂದರು.

ಒಂದು ಸಾವಿರ ಗಿಡಗಳನ್ನು ನೆಡುವ ಕನಸಿನೊಂದಿಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪರಿಸರವನ್ನು ಉಳಿಸುವ ಸಂರಕ್ಷಿಸುವ ಮಹತ್ವದ ಕೆಲಸ ಮಾಡಲು ಸನ್ನದ್ಧವಾಗಿದೆ ಎಂದು ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಹೇಳಿದರು

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಪ್ರಕೃತಿ ಇಲ್ಲದೇ ನಾವಿಲ್ಲ ಅದನ್ನು ಎಷ್ಟು ರಕ್ಷಸುತ್ತೇವೆಯೋ ಅದು ನಮ್ಮನ್ನು ರಕ್ಷಿಸುತ್ತದೆ. ನಮ್ಮ ಹಿರಿಯರು ಪರಿಸದ ಉಳಿವಿಗೆ ಶ್ರಮಿಸುತ್ತಿದ್ದರು. ಅವರಿಗೆ ಪರಿಸರದೊಂದಿಗೆ ಉತ್ತಮ ಒಡನಾಟವಿರುತ್ತಿತ್ತು ಆದರೇ ಇಂದಿನ ತಲೆಮಾರಿನ ಮಾನವ ಸಂಕುಲ ಪರಿಸರ ಉಳಿಸುವ ಪ್ರಯತ್ನವನ್ನು ಮಾಡದೇ ಇರುವುದು ಬೇಸರದ ಸಂಗತಿ.  

 ಭತ್ತದ ವಿವಿಧ ರೀತಿಯ ತಳಿಗಳು ಅವುಗಳನ್ನು ಸಂರಕ್ಷಿಸುವುದನ್ನು ಇಂದಿನ ಮಕ್ಕಳಿಗೆ ತಿಳಿಸುವುದು ಸಸ್ಯ ಶಾಮಲ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಉಳಿವಿಗಾಗಿ ಅರಿವು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇಂದಿನ ಮಕ್ಕಳಿಗೆ ನಮ್ಮ ಭತ್ತದ ತಳಿಗಳ ಪರಿಚಯವೇ ಇಲ್ಲದಂತಾಗಿದೆ. ನಮ್ಮ ಜೀವನಕ್ಕೆ ಆಧಾರವಾಗಿರುವಂತ ಈ ಪ್ರಕೃತಿ, ಗಿಡ, ಮರಗಳ ವಿವಿಧ ತಳಿಗಳು ಮುಖ್ಯವಾಗಿ ಆಹಾರ/ಭತ್ತದ ತಳಿಗಲ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಹಿರಿಯರಿಂದ ಬಂದಂತಹ ಕೃಷಿಯ ಕ್ರಾಂತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ನಾವು ಎಷ್ಟೋ ದೊಡ್ಡ ಹುದ್ದೆ ಏರಿದರೂ ಕೃಷಿಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಕಳದ ವರ್ಧಮಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ಶಶಿಕಲಾ ಹೆಗ್ಗಡೆ, ಪರಿಸರ ಪ್ರೇಮಿ, ಸಮಾಜ ಸೇವಕರಾದ ಅಬೂಬಕ್ಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ನಕ್ಷತ್ರ ಕಾರ್ಯಕ್ರಮವನ್ನು ನಿರೂಪಿಸಿದರು ಮನ್ವಿತ್‌ರಾಜ್ ಜೈನ್ ಸ್ವಾಗತಿಸಿದರು. ದಿವ್ಯಾ ಅತಿಥಿಗಳನ್ನು ಪರಿಚಯಿಸಿದರು. ಆರ್ಯನ್ ಶಿಂಧೆ ವಂದಿಸಿದರು. ಪೋಷಕರಿಗೆ ವಿವಿಧ ರೀತಿಯ ಸಸ್ಯ ಪ್ರಭೇದಗಳ ಗಿಡಗಳನ್ನು ನೀಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article