Sulya: ನೆಟ್ಟಾರು ಕೊಲೆ-ಮತ್ತೊಬ್ಬ ಆರೋಪಿ ಸೆರೆ
Wednesday, June 5, 2024
ಸುಳ್ಯ: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಮಂಗಳವಾರ ಬಂಧಿಸಿದೆ. ರಿಯಾಝ್ ಯೂಸುಫ್ ಹಾರಳ್ಳಿ ಬಂಧಿತ ಆರೋಪಿ.
ಆರೋಪಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಲು ಮುಂದಾದಾಗ ಮುಂಬೈ ವಿಮಾನ ನಿಲ್ದಾಣದಿಂದ ಎನ್‌ಐಎ ತಂಡ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ರಿಯಾಝ್ ಬಂಧನದಿಂದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದ ಆರೋಪಿಗಳ ಸಂಖ್ಯೆ 19ಕ್ಕೆ ಏರಿದೆ.