Udupi: ಪರಿಷತ್ ಚುನಾವಣೆ-ಉಡುಪಿಯಲ್ಲಿ ಪದವೀಧರ 75.38 ಶೇ., ಶಿಕ್ಷಕರ 80.72 ಶೇ. ಮತದಾನ

Udupi: ಪರಿಷತ್ ಚುನಾವಣೆ-ಉಡುಪಿಯಲ್ಲಿ ಪದವೀಧರ 75.38 ಶೇ., ಶಿಕ್ಷಕರ 80.72 ಶೇ. ಮತದಾನ


ಉಡುಪಿ: ಸೋಮವಾರ ನಡೆದ ವಿಧಾನ ಪರಿಷತ್ ನೈಋತ್ಯ ಪದವೀಧರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ಶೇ. 75.38 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 80.72 ಶೇ. ಮತದಾನವಾಗಿದೆ.

ಜಿಲ್ಲೆಯಲ್ಲಿ ಶಿಕ್ಷಕರ 10 ಹಾಗೂ ಪದವೀಧರ ಕ್ಷೇತ್ರದ 19 ಒಟ್ಟು 29 ಮತಗಟ್ಟೆಗಳಿದ್ದವು. ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನವಾಗಿತ್ತು. ಕಾಪು ಮತಗಟ್ಟೆಯೊಂದರಲ್ಲಿ ಸ್ವಲ್ಪ ಮಾತಿನ ಚಕಮಕಿ ಆದದ್ದು ಹೊರತುಪಡಿಸಿ ಮಿಕ್ಕೆಲ್ಲ ಕಡೆಗಳಲ್ಲೂ ಶಾಂತಿಯುತವಾಗಿ ಮತದಾನ ನಡೆದಿದೆ. ಮತದಾನದ ಅರ್ಹತೆ ಹೊಂದಿದವರಿಗೆ ಸಾಂದರ್ಭಿಕ ರಜೆ ಸೌಲಭ್ಯ ಕಲ್ಪಿಸಲಾಗಿತ್ತು.

ಸುಸೂತ್ರ ಮತದಾನಕ್ಕಾಗಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article