
Ujire: ಖಾಸಗಿ ಬಸ್-ಬೈಕ್ ಢಿಕ್ಕಿ: ಸವಾರ ಮೃತ್ಯು
Friday, June 28, 2024
ಉಜಿರೆ: ಲಾಯಿಲ ಸಮೀಪದ ಪುತ್ರಬೈಲು ಎಂಬಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಜೂ.28 ರಂದು ಬೆಳಿಗ್ಗೆ ನಡೆದಿದೆ.
ಬಳಂಜ ನಿವಾಸಿ ನಡ ಗ್ರಾಮ ಕರಣಿಕರ ಕಚೇರಿಯ ಗ್ರಾಮ ಸಹಾಯಕ ಜಯರಾಜ್ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯಿಂದ ನಡ ಕಚೇರಿಗೆ ಬೈಕಿನಲ್ಲಿ ತೆರಳುತ್ತಿದ್ದ ಅವರಿಗೆ ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದಾರಿ ಮಧ್ಯೆಯೇ ಕೊನೆಯುಸಿರೆಳೆದರು.