Ullal: ಉಳ್ಳಾಲಯಲ್ಲಿ ಮನೆಗಳ್ಳರು-ಎಚ್ಚರಿಕೆಯಿಂದ ಇರಲು ಸೂಚನೆ
Saturday, June 22, 2024
ಉಳ್ಳಾಲ: ಉಳ್ಳಾಲ ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರು ಠಾಣಾ ವ್ಯಾಪ್ತಿಯ ಕೆಲವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ಮನೆಗಳಿಗೆ ತೆರಳುತ್ತಿರುವ ಬಗ್ಗೆ ಗುಪ್ತಚರ ಮೂಲಕ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಠಾಣಾ ವ್ಯಾಪ್ತಿಯ ಜನರು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು ಎಂದು ಉಳ್ಳಾಲ ಠಾಣಾ ಇನ್‌ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ. ಮನೆ ಬಳಿ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು. ಅಪರಿಚಿತರು ಎಂದು ಕಂಡು ಬಂದಲ್ಲಿ ಉಳ್ಳಾಲ ಠಾಣಾ ಇನ್‌ಸ್ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉಳ್ಳಾಲ ಠಾಣಾ ಇನ್‌ಸ್ಪೆಕ್ಟರ್ ಬಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.