Bantwal: ಮಾಜಿ ಅರಣ್ಯ ಸಚಿವರ ನಿವಾಸಕ್ಕೆ ಹಾಲಿ ಸಚಿವ ಖಂಡ್ರೆ ಭೇಟಿ

Bantwal: ಮಾಜಿ ಅರಣ್ಯ ಸಚಿವರ ನಿವಾಸಕ್ಕೆ ಹಾಲಿ ಸಚಿವ ಖಂಡ್ರೆ ಭೇಟಿ


ಬಂಟ್ವಾಳ: ರಾಜ್ಯದ ಹಾಲಿ ಅರಣ್ಯ ಮತ್ತು ಪರಿಸರ ಇಲಾಖಾ ಸಚಿವ ಈಶ್ವರ್ ಖಂಡ್ರೆ ಅವರು ಮಂಗಳವಾರ ಬೆಳಿಗ್ಗೆ ಮಾಜಿ ಅರಣ್ಯ, ಪರಿಸರ ಸಚಿವ ಬಿ ರಮಾನಾಥ ರೈ ಅವರನ್ನು ಅವರ ಕಳ್ಳಿಗೆ ನಿವಾಸಕ್ಕೆ ಸೌಹಾರ್ಧ ಭೇಟಿ ನೀಡಿ ಕುಶಲೋಪಚರಿ ನಡೆಸಿದರು.

ಈ ಸಂದರ್ಭ ಜಿಲ್ಲೆಯ, ರಾಜ್ಯದ ಇತ್ತೀಚಿಗಿನ ರಾಜಕೀಯ ವಿಚಾರಗಳ ರ್ಛೆನಡೆಸಿದರಲ್ಲದೆ ವಯಕ್ತಿಕ ಹಾಗೂ ಇಲಾಖಾ ಕಾರ್ಯವೈಖರಿಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಸಚಿವ ಖಂಡ್ರೆ ಅವರ ಬೆಳಗ್ಗಿನ ಉಪಹಾರವನ್ನು ಮಾಜಿ ಸಚಿವ ರೈ ಅವರ ನಿವಾಸದಲ್ಲೆ ಮಾಡಿದರು.

ಮಾಜಿ ಸಚಿವ ರಮಾನಾಥ ರೈ, ಧನಭಾಗ್ಯ ಆರ್ ರೈ ದಂಪತಿಗಳು ಸಚಿವ ಖಂಡ್ರೆ ಅವರನ್ನು ಸ್ವಾಗತಿಸಿದರು.

ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಬೀರ್ ಎಸ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾದ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್, ಮಾಜಿ ಮೇಯರ್ ಗಳಾದ ಶಶಿದರ ಹೆಗ್ಡೆ, ಕೆ ಅಶ್ರಫ್, ಪಕ್ಷದ ಮುಖಂಡರಾದ ಮಾಯಿಲಪ್ಪ ಸಾಲ್ಯಾನ್, ಇಬ್ರಾಹಿಂ ನವಾಝ್ ಬಡಕಬೈಲು, ಸುದರ್ಶನ್ ಜೈನ್, ಡೆಂಝಿಲ್ ನೊರೊನ್ಹಾ, ವೆಂಕಪ್ಪ ಪೂಜಾರಿ ಬಂಟ್ವಾಳ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಜಗದೀಶ್ ಕೊಯಿಲ, ಪ್ರವೀಣ ರೋಡ್ರಿಗಸ್, ಮೋಹನ್ ಶೆಟ್ಟಿ, ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article