ರಾಹುಲ್ ಗಾಂಧಿ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಿ ಅಪಪ್ರಚಾರ: ರಮಾನಾಥ ರೈಯಿಂದ ಪೊಳಲಿಯಲ್ಲಿ ಪ್ರಾರ್ಥನೆ

ರಾಹುಲ್ ಗಾಂಧಿ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಿ ಅಪಪ್ರಚಾರ: ರಮಾನಾಥ ರೈಯಿಂದ ಪೊಳಲಿಯಲ್ಲಿ ಪ್ರಾರ್ಥನೆ


ಬಂಟ್ವಾಳ: ಹಿಂದೂ ಧರ್ಮದಲ್ಲಿ ಹಿಂಸೆಗೆ ಯಾವತ್ತು ಕೂಡ ಅವಕಾಶವಿಲ್ಲ ಎಂಬ ರೀತಿಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಪ್ರತಿಪಾದಿಸಿದ್ದಾರೆಯೇ ಹೊರತು ಹಿಂದೂಗಳು ಹಿಂಸಾವಾದಿಗಳೆಂದು ಹೇಳಿರುವುದಿಲ್ಲ ಅವರ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಸೋಮವಾರ ಪೊಳಲಿ ಶ್ರೀರಾಜರಾಜೇಶ್ವರೀ ದೇವಳದಲ್ಲಿ ಈ ವಿಚಾರದಲ್ಲಿ ಸತ್ಯದ ಸಂಕಲ್ಪದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಳದ ಹೊರಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿ ಜವಬ್ದಾರಿಯುತವಾಗಿ ಮಾತನಾಡಿದ್ದು, ಅವರ ಪ್ರತಿಯೊಂದು ಮಾತು ಕೂಡ ಲೋಕಸಭೆಯ ಕಡತದಲ್ಲಿ ದಾಖಲಾಗಿದೆ. ಹಿಂದೂ ಧರ್ಮದ ಬಗ್ಗೆ ಅಪಮಾನವಾಗವಂತ ರೀತಿಯಲ್ಲಿ ಎಲ್ಲು ಮಾತನಾಡಿಲ್ಲ ಅಸಂವಿಧಾನಿಕ ಪದಗಳಿದ್ದರೆ ಲೋಕಸಭಾಧ್ಯಕ್ಷರು ಅಂತಹ ಶಬ್ದಗಳನ್ನು ಕಡತದಿಂದ ತೆಗೆದುಹಾಕುತ್ತಾರೆ.ಇದನ್ನು ತಾನು ಸುಖಾಸುಮ್ಮನೆ ಪ್ರತಿಪಾದಿಸುತ್ತಿಲ್ಲ, ಲೋಕಸಭಾ ಕಡತದಲ್ಲಿ ದಾಖಲಾಗಿರುವ ಸತ್ಯದ ವಿಚಾರವನ್ನೇ ಹೇಳುತ್ತಿದ್ದೆನೆ ಎಂದು ರೈ ಸಷ್ಟಪಡಿಸಿದರು.

ಆದರೆ ಜಿಲ್ಲೆಯ ಸಂಘಟನೆಯೊಂದು ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಿಕೊಂಡು ಇತ್ತೀಚೆಗೆ ಪೊಳಲಿ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದೆ.ಹಿಂದೂ ಧರ್ಮದಲ್ಲಿ ಯಾವತ್ತು ಕೂಡ ಹಿಂಸೆಗೆ ಅವಕಾಶವಿಲ್ಲ, ಯಾರು ಹಿಂಸೆ ಮಾಡುತ್ತಾರೆಯೋ ಅಂತಹವರು ಹಿಂದೂವಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಯವರು ಪ್ರತಿಪಾದಿಸಿದ್ದಾರೆ. ಅವರು ಅಂದು ಮಾತನಾಡಿರುವ ಪ್ರತಿಯೊಂದು ಅಂಶ ಕೂಡ ದೇಶದ ಲೋಕಸಭೆಯ ನಡಾವಳಿಯಲ್ಲಿ ದಾಖಲಾಗಿರುತ್ತದೆ ಅದೊಂದು ‘ಡಾಕ್ಯುಮೆಂಟ್ ಎವಿಡೆನ್ಸ್’ ಆಗಿದ್ದು, ಅದನ್ನು ಯಾವುದೇ ಕಾಲಕ್ಕು ತಿರುಚಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದರು.

ಈ ಸತ್ಯವನ್ನು ಪ್ರತಿಪಾದಿಸುವ ದೆಸೆಯಲ್ಲಿ ಯಾವುದೇ ರಾಜಕೀಯ ಉದ್ದೇಶವನ್ನು ಕೂಡ ಬಯಸದೆ ಮನಸ್ಸಿನ ಸಂಕಲ್ಪವನ್ನು ಪೊಳಲಿ ದೇವಿಯ ಮುಂದೆ ಪ್ರಾರ್ಥನೆಯ ಮೂಲಕ ಸಲ್ಲಿಸಿದ್ದೆವೆ ಎಂದ ರೈ ಅವರು ಈ ಹಿಂದೆಯು ನನ್ನ ವಿರುದ್ಧವು ಸಾಕಷ್ಟು ಅಪಪ್ರಚಾರ ನಡೆಸುವ ಪ್ರಯತ್ನಗಳಾಗಿದ್ದು ಗ್ರಾ.ಪಂ. ಸದಸ್ಯನಾಗಲು ಸಾಧ್ಯವಿಲ್ಲದವರ ಹೇಳಿಕೆಗಳಿಗೆ ತಾನು ಉತ್ತರಿಸುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿಕುಂದರ್, ಸುದೀಪ್ ಕುಮಾರ್ ರೈ, ನಿಯೋಜಿತ ಅಧ್ಯಕ್ಷರುಗಳಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಪಕ್ಷದ ಮುಖಂಡರಾದ ಮಾಯಿಲಪ್ಪ ಸಾಲ್ಯಾನ್, ಪದ್ಮನಾಭ ರೈ, ಸುಧಾಕರಶೆಣೈ ಖಂಡಿಗ, ಸಂಪತ್ ಕುಮಾರ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜನಾರ್ದನ ಚಂಡ್ತಿಮಾರ್, ನಾರಾಯಣ ನಾಯ್ಕ್, ರಾಜು ಕೋಟ್ಯಾನ್, ಸುದರ್ಶನ್ ಜೈನ್, ಮಧುಸೂದನ್ ಶೆಣೈ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಮನೋಹರ್ ನೇರಂಬೋಳು, ತಿಮ್ಮಪ್ಪ ಪೂಜಾರಿ, ಸುರೇಶ್ ಕುಲಾಲ್ ನಾವೂರು, ವೀರೇಂದ್ರ ಅಮೀನ್, ಜಯಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article