
Mangalore: 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ, ಮೂರು ವಿಶ್ವ ದಾಖಲೆಯ ಪ್ರಯತ್ನ
ಮಂಗಳೂರು: ಯೇನೆಪೋಯ ವಿ.ವಿ. ಇದರ ಅದೀನ ಸಂಸ್ಥೆ ಯೇನೆಪೋಯ ಮೆಡಿಕಲ್ ಕಾಲೇಜು, ಇದರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ, ಯೋಗದ ಬಗ್ಗೆ ಜಾಗೃತಿ ಮೂಡಿಸಲು ಭವಿಷ್ಯತ್ತಿನ ದುಖಃಗಳನ್ನು ದೂರ ಮಾಡಲು ಯೋಗ ಎಂಬ ಧ್ಯೇಯದೊಂದಿಗೆ, ಮುಗೇರಡ್ಕ ಸರಕಾರಿ ಶಾಲಾ ಅಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯು ಜುಲೈ 22 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ಜುಲೈ 23 ರಂದು ಬೆಳಿಗ್ಗೆ 10 ಗಂಟೆಯ ವರೆಗೆ ನಿರಂತರವಾಗಿ (ಹಗಲು ರಾತ್ರಿ) ಯೋಗ ತರಬೇತಿ ಯೇನೆಪೋಯ ವಿ.ವಿ.ಯ ಎಂಡುರೆನ್ಸ್ ಜೋಸ್ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ಯೇನೆಪೋಯ ವಿ.ವಿ.ಯ ಉಪಕುಲಪತಿ ಡಾ. ವಿಜಯ ಕುಮಾರ್ ತಿಳಿಸಿದರು.
ಮೂರು ವಿಶ್ವ ದಾಖಲೆಯ ಪ್ರಯತ್ನ:
ಮ್ಯಾರಥಾನ್ ಯೋಗ ತರಬೇತಿಯ ಮೂಲಕ ಮೂರು ವಿಶ್ವದಾಖಲೆಯನ್ನು ಸಾದಿಸಲು ಪ್ರಯತ್ನಿಸಲಾಗುವುದು. ಒಂದೇ ಯೋಗ ಗುರು ಒಂದೇ ವೇದಿಕೆಯಲ್ಲಿ 25 ಗಂಟೆ ಯೋಗ ತರಬೇತಿ ನೀಡುವುದು, 25 ಗಂಟೆಯ ತರಬೇತಿಯಲ್ಲಿ 2500 ಮಿಕ್ಕಿ ವಿವಿಧ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿಗೆ ಒಳಗಾಗುವುದು. 25 ಗಂಟೆಯಲ್ಲಿ 400ಕ್ಕೂ ಮಿಕ್ಕಿ ಯೋಗ ಶಿಬಿರಾರ್ಥಿಗಳು ತರಬೇತಿ ಪಡೆಯಲಿದ್ದಾರೆ.
ಮ್ಯಾರಥಾನ್ ಯೋಗ ಪ್ರಚಾರಕ್ಕೆ ಚಾಲನೆ:
ಭಾರತದ ಪಾರಂಪಾರಿಕ ಯೋಗ ವಿದ್ಯೆಯು ಇಂದು ವಿಶ್ವಮಾನ್ಯತೆ ಪಡೆಯುವುದರಲ್ಲಿ ಯೋಗವು ಆರೋಗ್ಯ ಮೇಲೆ ಪರಿಣಾಮಕಾರಿಯ ಪ್ರಯೋಜನ ನೀಡುತ್ತಿರುವುದು ಕಾರಣ. ಯೋಗದ ಪ್ರಯೋಜನವನ್ನು ಆರೋಗ್ಯ ಕ್ಷೇತ್ರದಲ್ಲಿ ಸರಿಯಾಗಿ ಬಳಸಿಕೊಳ್ಳುವ ಜಾಗೃತಿಯ ಕಾರ್ಯ ಮ್ಯಾರಥಾನ್ ಯೋಗದ ಉದ್ದೇಶದಿಂದ ಆಯೋಜಿಸಿದ ಕಾರ್ಯಕ್ರಮದ ಯೆನೆಪೋಯ ವಿ.ವಿ.ಯ ಉಪಕುಲಪತಿ ಡಾ. ವಿಜಯ ಕುಮಾರ್ ಚಾಲನೆ ನೀಡಿದರು.
ವಿ.ವಿ.ಯ ರಿಜಿಸ್ಟ್ರರ್ ಡಾ. ಗಂಗಾಧರ ಸೋಮಾಯಾಜಿ ಸಹ ಉಪಕುಲಪತಿ ಡಾ. ಶ್ರೀಪತಿ ರಾವ್, ಪ್ರಾಂಶುಪಾಲ ಡಾ. ಮೂಸಬ್ಬ, ಉಪಪ್ರಾಂಶುಪಾಲ ಡಾ. ಪ್ರಕಾಶ್ ಸಲ್ಡಾನ್, ಡೀನ್ ಡಾ. ಅಭಯ್ ನಿರ್ಗುಡೆ, ಅಕಾಡೆಮಿಕ್ ಡೀನ್, ಡಾ. ಅಶ್ವಿನ್ ದತ್ತ, ಡಾ. ಅಬ್ದುಲ್ ರೆಹಮಾನ್, ಡಾ. ಎ.ವಿ ಮೊದಿನ್ ಕುಟ್ಟಿ, ಡಾ. ಅಬೀಬ್ ರೆಹಮಾನ್, ಡಾ. ನಾಗರಾಜ್, ಮ್ಯಾರಥಾನ್ ಯೋಗ ಸಂಚಾಲಕ ಯೋಗ ಗುರು ಕುಶಾಲಪ್ಪ ಗೌಡ, ಸಹಸಂಚಾಲಕಿ ಡಾ. ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು.
ಯೋಗ ಗುರು ಕುಶಾಲಪ್ಪ ಗೌಡ ಇವರು ತಲಾ 1.30 ಗಂಟೆಯ 17 ಬ್ಯಾಚ್‌ಗಳಲ್ಲಿ ತರಬೇತಿ ನೀಡಲಿದ್ದು, ತರಬೇತಿಯಲ್ಲಿ ಶಿಬಿರಾರ್ಥಿಗಳು ನಿತ್ಯ ಯೋಗ ಅನುಷ್ಠಾನಕ್ಕಾಗಿ 1 ಕ್ರಿಯೆ, 16 ಯೋಗಾಸನಗಳು, 2 ಪ್ರಾಣಾಯಾಮ, 1 ಧ್ಯಾನ ಹಾಗೂ 1 ವಿಶ್ರಾಂತಿ ಕ್ರಮದ ತರಬೇತಿ ನೀಡಲಾಗುವುದು.
ಭಾಗವಹಿಸುವ ಶಿಬಿರಾರ್ಥಿಗಳಿಗೆ 500 ರೂ. ಮೌಲ್ಯವಾದ ಯೋಗ ಪುಸ್ತಕ, ಯೋಗ ಬಟ್ಟೆ, ಯೋಗ ಕ್ಯಾಲೆಂಡರ್, ಯೋಗ ಪ್ರಮಾಣ ಪತ್ರ ಹಾಗೂ ಉಪಹಾರ ಉಚಿತವಾಗಿ ನೀಡಲಾಗುವುದು. ಮುಗೇರಡ್ಕಾ ಸರಕಾರಿ ಶಾಲಾ ಸೇವಾ ಟ್ರಸ್ಟ್‌ನ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆ ಪಡೆಯಲಾಗುವುದು.
ಮಾಹಿತಿ ಮತ್ತು ನೋಂದಾವಣೆಗಾಗಿ ಕುಶಾಲಪ್ಪ ಗೌಡ ಸಂಚಾಲಕರು ಮ್ಯಾರಥಾನ್ ಯೋಗ ಯೆನೆಪೋಯ ಮೆಡಿಕಲ್ ಕಾಲೇಜು ಮಂಗಳೂರು, 9845588740, 9591130105 ಅವರನ್ನು ಸಂಪಕಿಸಬಹುದಾಗಿದೆ.