Mangalore: ಸಂಸತ್ತಿನ ಒಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು: ಡಾ. ವೈ. ಭರತ್ ಶೆಟ್ಟಿ ಆಕ್ರೋಶ

Mangalore: ಸಂಸತ್ತಿನ ಒಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು: ಡಾ. ವೈ. ಭರತ್ ಶೆಟ್ಟಿ ಆಕ್ರೋಶ


ಮಂಗಳೂರು: ಸಂಸತ್ತಿನ ಒಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾವೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಅವನು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾನೆ. ನಾವು ಅವನಿಗೆ ಯಾವ ಶಬ್ದ ಪ್ರಯೋಗಿಸಬಹುದು ಎಣದಯ ನೋಡಿ. ಅವನ ಹೇಳಿಕೆಗಳನ್ನ ಗಮಿಸಿದರೆ ಅವನೊಬ್ಬ ದೊಡ್ಡ ಹುಚ್ಚ ಅನ್ನುವುದು ಸ್ಪಷ್ಟ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಹಿಂದೂಗಳನ್ನು ಹಿಂಸಾವಾದಿಗಳೆನ್ನುತ್ತಾನೆ. ಶಿವನ ಫೋಟೊ ಬೇರೆ ಹಿಡಿದು ನಿಂತಿದ್ದ. ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಂiiಗುತ್ತಾನೆ ಎಂದು ಈ ಹುಚ್ಚನಿಗೆ ಗೊತ್ತಿಲ್ಲ ಹಿಂದೂಗಳ ಬಗ್ಗೆ ಏನೂ ಮಾತಾಡಿದರೂ ಸುಮ್ಮನಿರುತ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಬಂದಿರಬಹುದು. ಅವನು ಪಾರ್ಲಿಮೆಂಟ್‌ನಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ ಎಂದು ಕಿಡಿಕಾರಿದರು.

ಪೇಜಾವರ ಸ್ವಾಮೀಜಿ ಹೇಳಿಕೆಯನ್ನು ವಿರೋಧಿಸಿ ಸ್ಥಳೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ಮತ್ತು ಹಿಂದುತ್ವ ಬೇರೆ ಬೇರೆ ಎಂಬ ಥಿಯರಿ ಹೇಳುವುದಕ್ಕೆ ಹೊರಟಿದ್ದಾರೆ. ೯೯ ಸೀಟು ಹಿಡಿದುಕೊಂಡು ಏನೋ ಸಾಧನೆ ಮಾಡಿದವನ ಹಾಗೆ ಮಾತಾಡುತ್ತಿದ್ದಾನೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು, ಎಲ್ಲಿ ಶಸ್ತ್ರ ತೆಗಿಬೇಕೋ ಅಲ್ಲಿ ತೆಗೀತೇವೆ. ಶಸ್ತ್ರ ಪೂಜೆ ಮಾಡಿ ಉತ್ತರ ಕೊಡುವುದಕ್ಕೂ ನಮಗೆ ಗೊತ್ತಿದೆ. ಅವನು ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾನೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾನೆ. ಅಂತಹ ದೊಡ್ಡ ಹುಚ್ಚ ರಾಹುಲ್ ಗಾಂಧಿ ಎಂದು ಲೇವಡಿ ಮಾಡಿದರು.

ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಪ್ರತಿಕೃತಿದಹಿಸುವ ನಿರ್ಧಾರ ಮಾಡಿದ್ದೆವು. ಆದರೆ ಪೊಲೀಸರು ಬೇಡ ಎಂದು ಹೇಳಿದ್ದಾರೆ. ಆ ರೀತಿ ಮಾಡಿದರೆ ನಮ್ಮ ವರ್ಗಾವಣೆ ಆಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರು ಸಹ ನಮ್ಮ ಜೊತೆ ಪ್ರತಿಭಟನೆಗೆ ಬರಬಹುದು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article