
Mangalore: ಕಿಟಕಿಯ ಗ್ರಿಲ್ ಕತ್ತರಿಸಿ ಕಳ್ಳತನಕ್ಕೆ ಯತ್ನ
Sunday, July 7, 2024
ಮಂಗಳೂರು: ನಗರದ ಕೋಡಿಕಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಮನೆಯವರು ಮಲಗಿದ್ದ ಕೊಠಡಿಯ ಕಿಟಕಿಯ ಗ್ರಿಲ್ ಕತ್ತರಿಸಿ ದುಷ್ಕರ್ಮಿಗಳ ತಂಡ ಶನಿವಾರ ರಾತ್ರಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದೆ.
ಸುಮಾರು ಐದಾರು ಮಂದಿ ಇದ್ದ ಕಳ್ಳರ ತಂಡ ಮನೆಯ ಆವರಣದೊಳಗೆ ನುಗ್ಗಿ ಕಿಟಕಿಯ ಗ್ರಿಲ್ ಕತ್ತರಿಸಿ ಕಳ್ಳತನಕ್ಕೆ ಯತ್ನಿಸುವ ಸಿಸಿ ಕ್ಯಾಮರಾ ದೃಶ್ಯ ವೈರಲ್ ಆಗಿದೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೇಸು ದಾಖಲಾಗಿದೆ.
ಶಂಕಿತರು ಪರಿಸರದಲ್ಲಿ ಅಥವಾ ಆಸುಪಾಸಿನಲ್ಲಿ ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ನಂಬರ್ 9480802321 ಅಥವಾ 112 ಗೆ ಮಾಹಿತಿ ನೀಡಬೇಕು. ಮನೆಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಹಾಗೂ ಪ್ರವೇಶ ದಾರಿ ಕಾಣುವಂತೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅವುಗಳನ್ನು ಸುಸ್ಥಿತಿಯಲ್ಲಿರುವ ಬಗ್ಗೆ, ರಾತ್ರಿಯ ದೃಶ್ಯಗಳು ಸ್ಪಷ್ಟವಾಗಿ ಕಾಣುವಂತೆ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಪೊಲೀಸರು ವಿನಂತಿಸಿದ್ದಾರೆ.