
Mangalore: ರಸ್ತೆಯಲ್ಲೇ ಹರಿಯುತ್ತಿರುವ ಮಳೆ ನೀರು
Tuesday, July 9, 2024
ಮಂಗಳೂರು: ಮಂಗಳೂರು ನಗರದ ಹೃದಯ ಭಾಗದಲ್ಲಿಯೇ ಸ್ವಲ್ಪ ಹೊತ್ತು ಸುರಿದ ಸಾಧಾರಣ ಮಳೆಗೆ ನೀರು ಹರಿದುಹೋಗಲೂ ಜಾಗವಿಲ್ಲ ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು ನಡೆದಾಡಲೀಲೂ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ನಿತ್ಯ ಅತಿ ಹೆಚ್ವು ಜನ ಸಂಚಾರವಿರುವ ಮಂಗಳೂರಿನ ಹಳೆ ಬಸ್ ನಿಲ್ದಾಣದಿಂದ ಸಿಟಿ ಸೆಂಟರ್ ತನಕ ಸಣ್ಣ ಮಳೆ ಬಿದ್ದರೂ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ.
ಕಳೆದ 5 ವರ್ಷಗಳಿಂದ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಗರ ಅಭಿವೃದ್ಧಿ ಮಾಡುವುದಾಗಿ ಹೆಳುತ್ತ ಬಂದಿದ್ದಲೂ ರಸ್ತೆ ಬದಿಯಲ್ಲಿ ಇರುವಂತಹ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ನೀರು ಹರಿಯಲು ಜಾಗವಿಲ್ಲದೇ ಸಣ್ಣ ಮಳೆಗೂ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ಪಾದಚಾರಿಗಳು ನಡೆದಾಡುವಾಗ ವಾಹನ ಸವಾರರು ಮಳೆ ನೀರಿನ ಸಿಂಚನ ಮಾಡುತ್ತಿದ್ದಾರೆ.