Mangalore: ಬಿಜೆಪಿಗೆ ಹೆಸರು ಬದಲಿಸುವಂತೆ ಹೆಗ್ಗಡೆ ಸಲಹೆ

Mangalore: ಬಿಜೆಪಿಗೆ ಹೆಸರು ಬದಲಿಸುವಂತೆ ಹೆಗ್ಗಡೆ ಸಲಹೆ


ಮಂಗಳೂರು: ಬಿಜೆಪಿಯವರು ಭಾರತೀಯ ಜನತ ಪಾರ್ಟಿ ಎಂದು ಇರುವುದನ್ನು ಭಾರತೀಯ ಜನತ ಪಂಥ ಎಂದು ಇಡಿ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಸಲಹೆ ನೀಡಿದರು.

ಅವರು ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿಗೆ ಕೆನ್ನೆಗೆ ಹೊಡೆಯಬೇಕು ಎಂಬುವುದಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ರಾಜಕೀಯವನ್ನು ಬಿಟ್ಟು ಅಲ್ಲಲ್ಲಿ ಮಠಗಳನ್ನು ಸ್ಥಾಪಿಸಿ ಕೇಂದ್ರದಲ್ಲಿ ನರೇಂದ್ರನಂದ ಸ್ವಾಮೀಜಿ, ಮಂಗಳೂರು ದಕ್ಷಿಣದಲ್ಲಿ ವೇದಾನಂದ ಸ್ವಾಮೀಜಿ, ಉತ್ತರದಲ್ಲಿ ಭರತನಂದ ಸ್ವಾಮೀಜಿ, ಬೆಳ್ತಂಗಡಿಯಲ್ಲಿ ಹರೀಶನಂದ ಸ್ವಾಮೀಜಿ ರಾಜ್ಯದಲ್ಲಿ ಅಶೋಕನಂದ ಸ್ವಾಮೀಜಿ ಮಠವನ್ನು ತೆರೆಯಲು ಲೇವಡಿ ಮಾಡಿದರು.

ಬಿಜೆಪಿಯವರು ಏನೇ ಮಾತನಾಡಿದರೂ ನಾವು ಏನೂ ಹೇಳುವಂತಿಲ್ಲ. ಸ್ವಾಮೀಜಿಗಳು ಬಿಜೆಪಿಯನ್ನು ಟೀಕಿಸಿದರೆ ಅವರೂ ಹಿಂದೂ ವಿರೋಧಿಗಳಾಗುತ್ತಾರೆ. ಇಲ್ಲಿ ಮುಸ್ಲಿಂ ಸಮುದಾಯದವರು ಹಿಂದೂ ಧಾರ್ಮಿಕ ಸ್ಥಳದಲ್ಲಿ ಅಂಗಡಿಯನ್ನು ಇಡಬಾರದು ಎನ್ನುತ್ತಾರೆ ಆದರೆ,  ಅಯೋಧ್ಯೆಯಲ್ಲಿ ಇದೇ ಬಿಜೆಪಿಯವರು ಹಿಂದೂಗಳ ಅಂಗಡಿಗೆ ತೆರಳಬಾರದು ಎಂದು ಅಪ ಪ್ರಚಾರ ಮಾಡುತ್ತಾರೆ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ರಾಮನನ್ನು ಕೂಡ ಟ್ರೋಲ್ ಮಾಡುವ ಮಟ್ಟಕ್ಕೆ ಈ ಬಿಜೆಪಿಯವರು ಇಳಿದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಹಿಂದುತ್ವದ ಆಶಯದ ವಿರುದ್ಧ ಹೋಗಿದ್ದಾರೆ. ಇವರಿಗೆ ಕೇವಲ ಓಟು ಕೇಳಲು ಮಾತ್ರ ಹಿಂದೂಗಳು ಬೇಕು ಇಲ್ಲದಿದ್ದಲ್ಲಿ ಹಿಂದುಗಳು ಇವರಿಗೆ ಬೇಕಾಗಿಲ್ಲ ಎಂದು ದೂರಿದರು.

ಶಾಸಕರುಗಳಾದ ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಅವರುಗಳು ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ತಿಳಿದಿದ್ದು, ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಗಡೆ ಅವರ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದ ಅವರು ಮಂಗಳೂರಿಗೆ ಬೆಂಕಿ ಹಚ್ಚುವ ಕೆಲಸ ಹಾಗೂ ಬಡವರ ಬದುಕನ್ನು ಹಾಳು ಮಾಡಲು ಬರಬೇಡಿ ಎಂದು ಎಚ್ಚರಿಸಿದರು.

ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಅವರಿಗೆ ಹೊಡೆಯಬೇಕು ಎಂದು ಇದ್ದಲ್ಲಿ ಹೊಡೆಯುವ ಮೊದಲು ಎ.ಜೆ. ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಬುಕ್ ಮಾಡಿ ಹೋಗುವಂತೆ ಎಂ.ಜಿ. ಹೆಗ್ಗಡೆ ಸಲಹೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article