Mangalore: ನೀಟ್ ಅಕ್ರಮ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Mangalore: ನೀಟ್ ಅಕ್ರಮ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ


ಮಂಗಳೂರು: ನೀಟ್ ಅವ್ಯವಹಾರ ಖಂಡಿಸಿ, ವಿಶೇಷ ತನಿಖೆಗೆ ಆಗ್ರಹಿಸಿ ಇಂದು ಮಂಗಳೂರಿನಲ್ಲಿ ಎನ್.ಎಸ್.ಯು.ಐ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕಳೆದ ಏಳು ವರ್ಷದಲ್ಲಿ 70 ಬಾರಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಧರ್ಮದ ಲೇಪದಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ತನಿಖೆಯ ಮೇಲೆಯೂ ನಂಬಿಕೆ ಇಲ್ಲ. ಸುಪ್ರಿಂ ಕೋರ್ಟ್ ನ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಇದು ದೇಶದ ದೊಡ್ಡ ಹಗರಣ. ಇದರ ಬಗ್ಗೆ ರಾಹುಲ್ ಗಾಂಧಿ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಇದುವರೆಗೂ ಪ್ರಧಾನಮಂತ್ರಿ ಉತ್ತರ ಕೊಟ್ಟಿಲ್ಲ. ಮಕ್ಕಳು, ಹೆತ್ತವರು ಆತಂಕಿತರಾಗಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಅವರು, ಸೀಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕುತಂತ್ರ ನಡೆದಿದೆ. ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪರ ಸದನದಲ್ಲಿ ಮಾತನಾಡಿದಾಗ ಮೈಕ್ ಬಂದ್ ಮಾಡಲಾಗಿದೆ. ಇದು ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ತೋರಿಸಿದ ಅಗೌರವವಾಗಿದೆ ಎಂದು ಹೇಳಿದರು

ಎನ್‌ಎಸ್‌ಯುಐನ ಸುಹಾನ್ ಆಳ್ವ, ಸವದ್ ಸಳ್ಯ, ಕಾಂಗ್ರೆಸ್ ನಾಯಕರಾದ ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಶಾಲೆಟ್ ಪಿಂಟೊ, ಎಂ.ಜಿ. ಹೆಗಡೆ ಮೊದಲಾದವರಿದ್ದರು.

ರಸ್ತೆ ತಡೆಗೆ ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article