Mangalore: ಮಗಳನ್ನು ರಕ್ಷಿಸುವಂತೆ ಜಮಾತ್‌ಗೆ ಮನವಿ

Mangalore: ಮಗಳನ್ನು ರಕ್ಷಿಸುವಂತೆ ಜಮಾತ್‌ಗೆ ಮನವಿ

ಮಂಗಳೂರು: ಮುಸಲಿಂ ಯುವಕ ನಿಂದ ಹಿಂದೂ ಯುವತಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ವಿನೋದ್ ಕುಮಾರ್ ಅವರು ಮಾಧ್ಯಮದವರ ಜತೆ ಮಾತನಾಡಿದ್ದು, ನಾನು ಅಲ್ಲಿನ ಜಮಾತ್ ಹೋಗಿ, ನನ್ನ ಮಗಳನ್ನು ಆತನಿಂದ ರಕ್ಷಿಸಿ ಕೊಡು ಮನವಿ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

ಜೂ.6ರಂದು ಅವಳು ಅಶ್ಫಾಕ್  ಜತೆ ಆಕೆಗೆ ಪ್ರೇಮ ಇರುವುದು ಗೊತ್ತಾಯಿತು. ಅದಕ್ಕಾಗಿ ಬುದ್ದಿ ಹೇಳಿ ಉಳ್ಳಾಲದ ಸಂಬಂಧಿಕರ ಮನೆಗೆ ಕಳುಹಿಸಿದ್ದೆವು. ಅದರೆ ಅತ ಅಲ್ಲಿಗೂ ಬಂದು ಜೂ.30 ರಂದು ಆಕೆಯನ್ನು ಅಪಹರಣ ಮಾಡಿದ್ದಾನೆ. ಮಗಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಮಗಳು ಬಿಸಿಎ ಓದುತ್ತಿದ್ದಳು. ಆದರೆ ದ್ವಿತೀಯ ವರ್ಷದ ಡಿಗ್ರಿಗೆ ಶುಲ್ಕ ಕಟ್ಟುವುದಕ್ಕೆ ಹಣ ಇರಲಿಲ್ಲ. ಹಾಗಾಗಿ ಅವಳು ಶಿಕ್ಷಣ ಮೊಟಕುಗೊಳಿಸಿದ್ದಳು. ಬಳಿಕ ಎರಡು ತಿಂಗಳು  ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಹಮ್ಮದ್ ಅಶ್ಫಾಕ್‌ನ  ಪರಿಚಯ ಆಗಿರಬೇಕು ಎಂದು ಅವರು ತಿಳಿಸಿದರು.

ಆಶ್ಪಾಕ್ ನನ್ನ ಮಗನಿಗೆ ಕರೆ ಮಾಡಿ ಮಗಳನ್ನು ಕರೆದು ಕೊಂಡು ಓಡಿ ಹೋಗಿರುವುದಾಗಿ ಹೇಳಿದ್ದಾನೆ. ಊರವರು ಹೇಳುವ ಪ್ರಕಾರ ಆತನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಆತನ ಮೇಲೆ ಹದಿನಾರಕ್ಕೂ ಹೆಚ್ಚು ಕೇಸ್ ಗಳಿವೆ. ಪೊಲೀಸರು ಆತನನ್ನು ಬಂಧಿಸಿ, ಕಠಿನ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article