ಪಾಲಿಕೆ ಆಯುಕ್ತರ ಕಚೇರಿ, ನಿವಾಸದ ಮೇಲೆ ಲೋಕಾಯುಕ್ತ ದಾಳಿ
Friday, July 19, 2024
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರ ಕಚೇರಿ ಹಾಗೂ ನಿವಾಸದ ಮನೆ ಮೇಲೆ ಇಂದು ಲೋಕಾಯುಕ್ತ ದಾಳಿ ನಡೆದಿದೆ.
ಲೋಕಾಯುಕ್ತ ಪೊಲೀಸರು ಮಂಗಳೂರು ಪಾಲಿಕೆಯ ಕಚೇರಿ ಮತ್ತು ಮಣ್ಣಗುಡ್ಡದ ಆಯುಕ್ತರ ಬಂಗಲೆಗೆ ಏಕಕಾಲದಲ್ಲಿ ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಆನಂದ ಸಿ.ಎಲ್ ಮೂಲತಃ ಮಂಡ್ಯದವರಾಗಿದ್ದು ಸೈನಿಕನಾಗಿ ನಿವೃತ್ತಿ ಪಡೆದು ಕೆಎಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಆರಂಭಿಸಿದ್ದರು. ಮೈಸೂರಿನಲ್ಲಿ ವಿಭಾಗಾಧಿಕಾರಿ ಮತ್ತು ಬೆಂಗಳೂರು ಬಿಡಿಎಯಲ್ಲಿ ಅಧಿಕಾರಿಯಾಗಿದ್ದ ವೇಳೆ ಅಕ್ರಮ ಆಸ್ತಿ ಮಾಡಿಕೊಂಡ ಬಗ್ಗೆ ಆನಂದ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಹೋಗಿತ್ತು.
ಆನಂದ ಸಿಎಲ್ ಅವರು ಅಕ್ರಮ ಆಸ್ತಿ ಇದೆ ಎನ್ನಲಾದ ಮೈಸೂರು, ಬೆಂಗಳೂರಿನಲ್ಲೂ ದಾಳಿ ನಡೆದಿದೆ. ಮಂಗಳೂರಿನಲ್ಲಿ ಡಿವೈಎಸ್ಪಿ ಬಸವರಾಜ ಮಗ್ದುಂ ನೇತೃತ್ವದಲ್ಲಿ ದಾಳಿಯಾಗಿದೆ.