Mangalore: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ವಿತ್ತ ಸಚಿವರಿಗೆ ಕ್ಯಾಂಪ್ಕೊ ಮನವಿ

Mangalore: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ವಿತ್ತ ಸಚಿವರಿಗೆ ಕ್ಯಾಂಪ್ಕೊ ಮನವಿ


ಮಂಗಳೂರು: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ವಿತ್ತ ಸಚಿವರಾಗಿ ಮರು ನೇಮಕಗೊಂಡಿರುವ ನಿರ್ಮಲಾ ಸೀತರಾಮನ್ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯು, ಎಲ್ಲಾ ಸದಸ್ಯ ಬೆಳೆಗಾರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ, ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ಕ್ಯಾಂಪ್ಕೊ ವಿತ್ತ ಸಚಿವರಿಗೆ ಮನವಿ ಸಲ್ಲಿಸಿದೆ.

ಅಡಿಕೆಯ ಮೇಲಿನ ಜಿ.ಎಸ್.ಟಿಯನ್ನು ಶೇ.5 ನಿಂದ ಶೇ.2ಗೆ ಇಳಿಸಲು ಆಗ್ರಹಿಸಿದೆ. ಇದರಿಂದ ರೈತರು ಸಹಕಾರಿ ಸಂಸ್ಥೆಗಳಲ್ಲಿ ವ್ಯವಹರಿಸಲು ಉತ್ತೇಜನ ಸಿಗುವುದು, ತೆರಿಗೆ ಕಳ್ಳತನಕ್ಕೆ ಕಡಿವಾಣ ಬೀಳಲಿದ್ದು ಸರಕಾರಕ್ಕೆ ತೆರಿಗೆಯ ಆದಾಯ ಹೆಚ್ಚಾಗಲಿದೆ.ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.,  ಮೈಲುತುತ್ತದ ಮೇಲಿನ ಜಿ.ಎಸ್.ಟಿಯನ್ನು ಶೇ.18ನಿಂದ ಶೇ.5ಗೆ ಇಳಿಸಬೇಕು. ಅಡಿಕೆ ತೋಟದ ರೋಗ ನಿರ್ವಹಣೆಗೆ ಬಳಸುವ ಮೈಲುತುತ್ತದ ಮೇಲಿನ ಜಿ.ಎಸ್.ಟಿ ಕಡಿಮೆ ಮಾಡುವುದರಿಂದ ಖರ್ಚು ಕಡಿಮೆ ಮಾಡಲು ಸಹಾಯವಾಗುವುದು., ಕಾರ್ಬನ್ ಫೈಬರ್ ದೋಟಿಯ ಆಮದು ಸುಂಕವನ್ನು ಕಡಿತಗೊಳಿಸಬೇಕು ಇದರಿಂದ ರೈತರು ತಾನು ಬೆಳೆದ ಅಡಿಕೆಯ ಕೊಯ್ಲು ಮತ್ತು ತೋಟದ ನಿರ್ವಹಣೆಗೆ ವಿಶೇಷವಾಗಿ ಕಾರ್ಬನ್ ಫೈಬರ್ ದೋಟಿಯನ್ನು ಅವಲಂಬಿಸಿದ್ದಾರೆ. ಈ ಉತ್ಪನ್ನದ ಮೇಲೆ ಸರಾಸರಿ ಶೇ.48 ಆಮದು ಸುಂಕ ವಿಧಿಸಲಾಗುತ್ತಿದೆ. ಇದರಿಂದ ಸಾಮಾನ್ಯ ರೈತರಿಗೆ ಇದು ಕೈಗೆಟುಕುತ್ತಿಲ್ಲ. ಆಮದು ಸುಂಕವನ್ನು ಕಡಿಮೆ ಮಾಡುವುದರಿಂದ ಎಲ್ಲಾ ವರ್ಗದ ರೈತರಿಗೂ ಸಹಾಯವಾಗಲಿದೆ.

ಅಡಿಕೆ ಮತ್ತು ಕರಿಮೆಣಸಿನ ಅಕ್ರಮ ಆಮದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇದರಿಂದ ಅಡಿಕೆ ಮತ್ತು ಕರಿಮೆಣಸು ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಿದೆ. ಆದರೂ, ಇವೆರಡರ ಅಕ್ರಮ ಆಮದು ಅವ್ಯಾಹತವಾಗಿ ನಡೆಯುತ್ತಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ರೈತರ ಜೀವನೋಪಾಯಕ್ಕೆ ಮಾರಕವಾಗಿದೆ., ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಗೆ ಕನಿಷ್ಠ ಬೆಲೆ ನಿಗದಿ ಪಡಿಸಬೇಕು ಇದರಿಂದ ವಿದೇಶಿ ಅಡಿಕೆಗೆ ಕನಿಷ್ಠ ಆಮದು ಬೆಲೆ ಘೋಷಣೆ ಮಾಡಿದರೂ, ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮರು ಹರಾಜು ಹಾಕಲಾಗುತ್ತಿದೆ. ಮಾನವನ ಉಪಯೋಗಕ್ಕೆ ಯೋಗ್ಯವಲ್ಲದ ಇಂತಹ ಅಡಿಕೆ ಅನಿಯಂತ್ರಿತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆದು, ದೇಶೀ ಮಾರುಕಟ್ಟೆಗೆ ಮಾರಣಾಂತಿಕ ಹೊಡೆತ ನೀಡಿದೆ.

ಅಕ್ರಮ ವ್ಯವಹಾರ ತಡೆಗೆ ಕ್ರಮ ಕೈಗೊಳ್ಳಬೇಕು ಇದರಿಂದ ಎಲ್ಲಾ ದೊಡ್ಡ ಸರಕು ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸುವುದು ಮತ್ತು ಎಲ್ಲಾ ತಪಾಸಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿ ತಪಾಸಣೆ ನಡೆಸುವುದರ ಮೂಲಕ ಅಕ್ರಮ ವ್ಯವಹಾರವನ್ನು ತಡೆಯಬಹುದು., ಜಿ.ಎಸ್.ಟಿ ಸ್ವರೂಪವನ್ನು ಸರಳಗೊಳಿಸಬೇಕು ಇದರಿಂದ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ ಮುಂತಾದ ಬಹು ಸ್ಥರದ ತೆರಿಗೆಯ ಬದಲು ಸರಳ ಮತ್ತು ಏಕೀಕೃತ ತೆರರಿಗೆ ವ್ಯವಸ್ಥೆಯನ್ನು ಜಾರಿಗೆಗೊಳಿಸಿ ಸರಳಗೊಳಿಸಬೇಕಾಗಿ ಮನವಿ ಮಾಡಲಾಯಿತು.

ಕೆವೈಸಿ ಅನುಸರಣೆಯ ಜವಾಬ್ದಾರಿ ಇಲಾಖೆಯದ್ದಾಗಿರಬೇಕು ಇದರಿಂದ ಜಿಎಸ್‌ಟಿಯ Iಖಿಅ ಪೋರ್ಟಲ್ ಅಡಿಯಲ್ಲಿ ಕೆವೈಸಿ ಹೊಂದಾಣಿಕೆಯಾಗದೇ ಹೊದರೆ ತೆರಿಗೆ ಪಾವತಿದಾರರನ್ನು ಹೊಣೆಗಾರರನ್ನಾಗಿಸುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಇಲಾಖೆಗಳೇ ಜವಾಬ್ದಾರರಾಗಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article