ಮಂಗಳೂರು: ನಗರದ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿದ್ದ ಹೊಂಡ, ಗುಂಡಿಗಳನ್ನು ಟ್ರಾಫಿಕ್ ಎಸ್‌ಐ ಸ್ವತಃ ತಾವೇ ಸಲಿಕೆ ಹಿಡಿದು ದುರಸ್ತಿಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ಸ್ವಾಮಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.