
Mangalore: ಡೆಂಗ್ಯೂ ರೋಗದಿಂದ ಮುಕ್ತರಾಗಲು ಪಾರಂಪರಿಕ ಜೀವನ ಪದ್ಧತಿಗೆ ಮರಳಬೇಕು: ಕುಮಾರೇಶ್ವರ ಭಟ್ ಮುಂಡಾಜೆ
Thursday, July 4, 2024
ಮಂಗಳೂರು: ಡೆಂಗ್ಯೂ ರೋಗದಿಂದ ಮುಕ್ತರಾಗಲು ನಮ್ಮ ಪಾರಂಪರಿಕ ಜೀವನ ಪದ್ಧತಿಗೆ ಮರಳಬೇಕು ಎಂದು ಪ್ರಾಧ್ಯಾಪಕ ಕುಮಾರೇಶ್ವರ ಭಟ್ ಮುಂಡಾಜೆ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಜಂಟಿ ಆಶ್ರಯದಲ್ಲಿ ಕಂಕನಾಡಿಯ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಡೆಂಗ್ಯೂ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ನಮ್ಮ ಸುತ್ತಲಿನ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ತಾಣ ಇರದಂತೆ ನೋಡಿಕೊಳ್ಳಬೇಕು. ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೈರ್ಮಲ್ಯ ಕಾಪಾಡುವಲ್ಲಿ ಮಕ್ಕಳ ಪಾತ್ರ ಅಪಾರ. ಪ್ಲ್ಯಾಸ್ಟಿಕ್ ತ್ಯಾಜ್ಯದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಸೃಷ್ಟಿಯಾಗುವ ಬಗ್ಗೆ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು ಎಂದರು.
ಮಳೆಗಾಲದಲ್ಲಿ ರೋಗಗಳಿಂದ ಹೇಗೆ ದೂರವಿರಬೇಕು, ಯಾವ ಕ್ರಮಗಳನ್ನು ಪಾಲಿಸಬೇಕು ಎಂಬ ಕುರಿತು ಗುಂಪು ಚಟುವಟಿಕೆ, ಸಂವಾದದ ಮೂಲಕ ತಿಳಿಸಿದರು. ಶಿಕ್ಷಕಿಯರಾದ ಡೋರತಿ, ವೀಣಾ ಉಪಸ್ಥಿತರಿದ್ದರು. ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳಾದ ಫಿದಾ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿ, ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು.