.jpeg)
Mangalore: ಡಾ. ಭರತ್ ಶೆಟ್ಟಿಯವರ ಹೇಳಿಕೆ ಅವರ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ನಿನ್ನೆ ನಡೆದ ಪ್ರತಿಭಟನೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯಬೇಕು ಎಂಬ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿಯವರ ಹೇಳಿಕೆ ಅವರ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ ಎದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಮಾತಾಡುವಾಗ ತಾನೊಬ್ಬ ಸುಶಿಕ್ಷಿತ, ವೈದ್ಯ, ಶಾಸಕನಾಗಿದ್ದೇನೆ ಎಂಬುದ್ದಕ್ಕಾದರೂ ಬೆಲೆ ಕೊಡಬೇಕಿತ್ತು. ನೀವು ಮಾತನಾಡುದ ಮಾತು ಹಿಂದು ಸಮಾಜ ತಿಳಿಸಿಕೊಟ್ಟ ಸಂಸ್ಕೃತಿಯೇ? ಒಬ್ಬ ಹಿಂದು ಸಮಾಜದ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿ ಸಂವಿಧಾನದ ಹುದ್ದೆಗಾದರೂ ಗೌರವ ಕೊಡಬೇಕಿತ್ತು.
ಪ್ರತಿಭಟನೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬೃಜೇಶ್ ಚೌಟರವರೂ ಇದ್ದರು. ನಿಮಗೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವುದಕ್ಕಿಂತ, ರಾಹುಲ್ ಗಾಂಧಿಯವರು ಏನು ಮಾತನಾಡಿದ್ದಾರೆ, ಆ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸುವ ಅವಕಾಶ ಇದೆ. ಅಲ್ಲಿ ಈ ವಿಚಾರದ ಬಗ್ಗೆ ಮಾತಾಡಲಿ. ಅದು ಬಿಟ್ಟು ರಸ್ತೆಯಲ್ಲಿ ನಿಂತು ಪ್ರತಿಭಟಿಸುವುದಲ್ಲ.
ಪ್ರತಿಪಕ್ಷದ ನಾಯಕನಾಗಿ ರಾಹುಲ್‌ಗಾಂಧಿ ಸದನದಲ್ಲಿ ಮಾತನಾಡಿರುವುದನ್ನು ಹಿಂದು ಸಮಾಜ ಸೇರಿ ಸ್ವಾಮೀಜಿಗಳು ಸ್ವಾಗತಿಸಿದ್ದಾರೆ. ರಾಹುಲ್ ಗಾಂಧಿ ಹಿಂದು ಸಮಾಜವನ್ನು ಎಂದೂ ದೂಷಣೆ ಮಾಡಿಲ್ಲ. ಹಿಂದು ಸಮಾಜದ ಹೆಸರು ಹೇಳಿಕೊಂಡು ದ್ವೇಷಕಾರುತ್ತಿರುವ ಬಿಜೆಪಿ, ಆರ್.ಎಸ್.ಎಸ್.ನ ದ್ವೇಷದ ರಾಜಕಾರಣವನ್ನು ವಿರೋಧಿಸಿದ್ದಾರೆ ಎಂಬುದು ಸಮಸ್ತ ಭಾರತೀಯರಿಗೆ ತಿಳಿದಿದೆ. ಅದನ್ನು ಶಾಸಕರು ವಿಷಯಾಂತರ ಮಾಡಿ ಮತ್ತೆ ದ್ವೇಷ ಬಿತ್ತುವುದನ್ನು ಶಾಸಕರು ಕೈಬಿಟ್ಟು ಕೂಡಲೇ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆಗೆ ಕ್ಷಮೆ ಕೇಳಲಿ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.