Mangalore: ಸ್ವಾಮೀಜಿಗಳು ಹಿಂದೂ ಸಮಾಜದಲ್ಲಿ ಆಗುತ್ತಿರುವ ತಾರತಮ್ಯದ ಕಡೆಗೆ ಗಮನ ಹರಿಸಲು ಪದ್ಮರಾಜ್ ಸಲಹೆ

Mangalore: ಸ್ವಾಮೀಜಿಗಳು ಹಿಂದೂ ಸಮಾಜದಲ್ಲಿ ಆಗುತ್ತಿರುವ ತಾರತಮ್ಯದ ಕಡೆಗೆ ಗಮನ ಹರಿಸಲು ಪದ್ಮರಾಜ್ ಸಲಹೆ


ಮಂಗಳೂರು: ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡದೇ ಮಾಡದೇ ಹಿಂದೂ ಸಮಾಜದಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಗಮನ ಹರಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ತಿಳಿಸಿದರು.

ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಾಹುಲ್ ಗಾಂಧಿ ಅವರ ಹೇಳಿಕೆಗೆ ಉಡುಪಿಯ ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಮಾತನಾಡಿರುವುದರ ಬಗ್ಗೆ ತಿರುಗೇಟು ನೀಡಿದರು.

ಧಾರ್ಮಿಕ ಕ್ಷೇತ್ರದಲ್ಲಿರುವ ಸ್ವಾಮೀಜಿಗಳು ರಾಜಕೀಯ ಮಾತನಾಡುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ನಾವು ಎಂದಿಗೂ ಹಿಂದೂ ಸಮಾಜವನ್ನು ಬಿಟ್ಟುಕೊಟ್ಟಿಲ್ಲ. ನನಗೂ ಈ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂಗಳು ಮತ ಹಾಕಿದ್ದಾರೆ. ನಾವುಗಳು ಕೂಡ ಹಿಂದೂಗಳು. ಪೇಜಾವರ ಶ್ರೀಗಳು ತಮ್ಮ ವ್ಯಾಪ್ತಿಯನ್ನು ಅರಿಯು ಅದರ ಕಡೆಗೆ ಗಮನ ಹರಿಸಿದರೆ ಉತ್ತಮ ಎಂದು ಹೇಳಿದರು.

ಪೇಜಾವರ ಶ್ರೀಗಳು ಆಸೆ-ಆಮೀಷಗಳನ್ನು ತೋರಿಸಿ ಜನರಿಂದ ಮತ ಪಡೆದಿದ್ದಾರೆ ಎಂಬುಗುದಾಗಿ ಹೇಳುವವರು ನೀವು ರಾಮ ಮಂದಿರ ಪೂರ್ಣಗೊಳ್ಳುವ ಮೊದಲೇ ಜನರಲ್ಲಿ ದೇವರ ಹೆಸರನ್ನು ಹೇಳಿ ತರಾತುರಿಯಲ್ಲಿ ಮಂದಿರವನ್ನು ಉದ್ಘಾಟಿಸಿದ್ದು, ಜನರಲ್ಲಿ ಆಸೆ-ಆಮೀಷವನ್ನು ತೋರಿಸಿದವರು ಯಾರು? ಇದು ರಾಜಕೀಯವಲ್ಲವೇ? ಇದರಲ್ಲಿ ರಾಜಕೀಯ ಮಾಡಿದವರು ಯಾರು ಎಂದು ಪ್ರಶ್ನಿಸಿದರು.

ದೇಶದಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ, ನೀಟ್ ಪರೀಕ್ಷೆಯ ಸೋರಿಕೆಯಿಂದಾಗಿ ಬಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುವುದಿಲ್ಲ. ಇವರಿಗೆ ಬಡವರ ಕಾಳಜಿ ಇಲ್ಲ. ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯ ಮಟ್ಟದಲ್ಲಿ ಸಿಇಟಿ ಪರೀಕ್ಷೆಯನ್ನು ಜಾರಿಗೆ ತಂದು ಬಡ ಮಕ್ಕಳೂ ಇಂಜಿನಿಯರ್, ಡಾಕ್ಟರ್‌ಗಳಾಗುವಂತೆ ಮಾಡಿದರು ಆದರೆ ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ತಂದು ಬಡವರಿಗೆ ಅನ್ಯಾಯ ಮಾಡಿದೆ ಇದರ ಬಗ್ಗೆ ಯಾಕೆ ಶ್ರೀಗಳು ಪ್ರಶ್ನಿಸುವುದಿಲ್ಲ ಎಂದು ಕೇಳಿದ ಅವರು ಸಣ್ಣ ಸಣ್ಣ ವಿಚಾರಕ್ಕೆ ಬಿಜೆಪಿಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟಿಸುವವರು ನೀಟ್ ಹಗರಣದ ಬಗ್ಗೆ ಯಾಕೆ ಇಲ್ಲಿಯ ತನಕ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಹಿಂದುತ್ವದ ಗುತ್ತಿಗೆ ಕೊಟ್ಟವರ ಬಗ್ಗೆ ಮಾತನಾಡುತ್ತಿದ್ದಾರೆ. ಯಾರ ಇದನ್ನು ವಿರೋಧಿಸುತ್ತಾರೆ ಅವರನ್ನು ಧಮನಿಸುವ ಕೆಲಸ ಮಾಡುತ್ತಾರೆ. ಕಳೆದ 10 ವರ್ಷದಲ್ಲಿ ಬಿಜೆಪಿ ವಿರೋಧ ಪಕ್ಷವನ್ನು ಧಮನಿಸುವ ಕೆಲಸವನ್ನು ಮಾಡಿದ್ದಾರೆ. ಅದನ್ನು ಅರಿತ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಗೆ ಪ್ರತಿಭಟನೆ ಮಾಡುವ ಬಿಜೆಪಿ ಸರ್ಕಾರ 2013ರಲ್ಲಿ ಕ್ರೂಡ್ ಆಯಿಲ್‌ಗೆ 142 ಡಾಲರ್ ಇದ್ದರೂ ಆಗ ಪ್ರಧಾನಿಗಳಾದ ಮನಮೋಹನ್‌ಸಿಂಗ್ ಅವರು 62 ರೂ.ಗೆ ಪ್ರೆಟ್ರೋಲ್-ಡೀಸೆಲ್ ನೀಡಿದ್ದಾರೆ. 2013 ರ ನಂತರ ಮೋದಿ ಸರ್ಕಾರ ಬಂದಿದ್ದು, ಕೋವಿಡ್ ಸಂದರ್ಭದಲ್ಲಿ 1 ಬ್ಯಾರಲ್ ಕ್ರೂಡ್ ಆಯಿಲ್‌ಗೆ 23 ಡಾಲರ್ ಇತ್ತು. ಈಗಲೂ 80-82 ಡಾಲರ್ ಇದೆ ಆದರೂ ಒಂದು ದಿನವಾದರೂ 60-62 ರೂ.ಗೆ ಪೆಟ್ರೋಲ್-ಡೀಸೆಲ್ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಪತ್ನಿಯ ಪ್ರಕಾರಣದ ಆರೋಪದಲ್ಲಿ ಹುಳುವಿಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಅಣ್ಣ ೩.೫ ಎಕ್ಕರೆ ಜಾಗವನ್ನು ನೀಡಿದ್ದು, ಅದನ್ನು ಮೂಡಾದವರು ನಿವೇಶ ನಿರ್ಮಾಣ ಮಾಡಲು ಪಡೆದಿದ್ದು, ಅದಕ್ಕೆ ಇವರು ಹಣವನ್ನು ಪಡೆದಿಲ್ಲ ಆದುದರಿಂದ ಅವರಿಗೆ ಬೇರೆ ನಿವೇಶನ ನೀಡಿದ್ದಾರೆ. -ಪದ್ಮರಾಜ್ ಆರ್. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article