
Manjeswara: ಆವರಣ ಗೋಡೆ ಕುಸಿದು ಬಿದ್ದು ಎರಡೂವರೆ ವರ್ಷದ ಮಗು ಗಂಭೀರ
Thursday, July 4, 2024
ಮಂಜೇಶ್ವರ: ಆಟವಾಡುತ್ತಿದ್ದ ಎರಡೂವರೆ ವರ್ಷ ಪ್ರಾಯದ ಮಗುವಿನ ಮೇಲೆ ಆವರಣ ಗೋಡೆಯೊಂದು ಕುಸಿದು ಬಿದ್ದು ಮಗುವನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 3ನೇ ವಾರ್ಡಿನ ಕುಂಜತ್ತೂರು ಸನ್ನಡ್ಕದಲ್ಲಿ ವಾಸವಾಗಿರುವ ಅನ್ಯರಾಜ್ಯ ಕಾರ್ಮಿಕ ಉತ್ತರ ಪ್ರದೇಶ ನಿವಾಸಿ ಮಹಮ್ಮದ್ ಅಮೀನ್ ಎಂಬವರ ಪುತ್ರ ಎರಡೂವರೆ ವರ್ಷದ ಬಾಲಕ ಶೆರ್ಶಾಝ್ ಶಾ ಗಂಭೀರ ಗಾಯಗೊಂಡಿದ್ದಾನೆ.
ಸಮೀಪ ವಾಸವಾಗಿರುವ ಖಾದರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾರ್ಡ್ ಸದಸ್ಯ ಹಾಗೂ ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.