
Moodubidire: ಕೃಷ್ಣೋತ್ಸವ-2024 ಪ್ರಥಮ ಆಮಂತ್ರಣ ದೇಗುಲಗಳಿಗೆ ಸಮರ್ಪಣೆ
Friday, July 12, 2024
ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 108ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ನಡೆಯುವ ಕೃಷ್ಣೋತ್ಸವದ 2024 ಕಾರ್ಯಕ್ರಮದ ಪ್ರಯುಕ್ತ ಮೊದಲ ಕರಪತ್ರ ಜೊತೆ ಫಲ ಪುಷ್ಪ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಹನುಮಂತ ದೇವಸ್ಥಾನ ಶ್ರೀ ವೆಂಕಟರಮಣ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ, ಅಲಂಗಾರು ಮಹಾಲಿಂಗೇಶ್ವರ, ಗೌರಿ ದೇವಸ್ಥಾನ, ಮಹಾಲಸ ನಾರಾಯಣಿ ದೇವಸ್ಥಾನ, ಆದಿಶಕ್ತಿ ಮಹಾದೇವಿ ದೇವಸ್ಥಾನ, ಆದಿಶಕ್ತಿ ಮಹಾಕಾಳಿ ದೇವಸ್ಥಾನದಲಿ ಸಮರ್ಪಿಸಲಾಯಿತು.
ಶ್ರೀ ಗೋಪಾಲಕೃಷ್ಣ ದೇಗುಲದ ಆಡಳಿತ ಮುಖ್ಯಸ್ಥ ಗುರುಪ್ರಸಾದ್ ಹೊಳ್ಳ , ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಸಂಚಾಲಕ ನಾರಾಯಣ ಪದುಮಲೆ, ಟ್ರಸ್ಟಿ ರಂಜಿತ್ ಶೆಟ್ಟಿ, ಕೋಶಾಧಿಕಾರಿ ಗಣೇಶ್ ಪೈ ಸೇವಾ ಪ್ರಮುಖ್ ಸಂಪತ್ ಪೂಜಾರಿ, ರಕ್ತ ನಿಧಿ ಪ್ರಮುಖ ಮನು, ಪ್ರಮುಖರುಗಳಾದ ಸುಕನ್ಯಾ, ವಿಶ್ವಾಸ್ ಉಪಸ್ಥಿತರಿದ್ದರು.