
Moodubidire: ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ಮೈ೦ಡ್ ಮ್ಯಾಪಿ೦ಗ್ ಕಾರ್ಯಾಗಾರ
Thursday, July 11, 2024
ಮನಸ್ಸಿನ ಸಾಮಾರ್ಥ್ಯಕ್ಕೆ ಮಿತಿಯಿಲ್ಲ: ಡಾ ಸರ್ಫ಼್‌ರಾಜ್ ಜೆ. ಹಾಶಿಮ್
ಮೂಡುಬಿದಿರೆ: ನಮ್ಮ ಸುಪ್ತ ಮನಸ್ಸಿಗೆ ಅದ್ಭುತವಾದ ಸಾಮಾರ್ಥ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊ೦ಡರೆ ಜೀವನದಲ್ಲಿ ನಾವು ಇಟ್ಟ ಗುರಿಯನ್ನು ತಲುಪಬಹುದು. ಋಣಾತ್ಮಕ ಆಲೋಚನೆಗಳು ಬ೦ದ ಸ೦ದರ್ಭಲ್ಲಿ ಅದನ್ನು ನಿಯ೦ತ್ರಿಸಲು ಧನಾತ್ಮಕ ಆಲೋಚನೆಗಳನ್ನು ಮಾಡಬೇಕು ಎಂದು ಮ೦ಗಳೂರಿನ ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾ೦ಶುಪಾಲ ಡಾ ಸರ್ಫ಼ಾಜ್ ಜೆ ಹಾಶಿಮ್ ಹೇಳಿದರು.
ಅವರು ಜು.11 ರಂದು ಇಲಿನ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೈ೦ಡ್ ಮ್ಯಾಪಿ೦ಗ್ ವಿಷಯದ ಬಗ್ಗೆ ಒ೦ದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾರನಾಡಿದರು.
ನಮ್ಮ ಮನಸ್ಸು ನಮ್ಮ ಸ್ಥಿಮಿತದಲ್ಲಿದ್ದಲ್ಲಿ ಮಾತ್ರ ಹೊರಗಿನ ಪ್ರಪ೦ಚದಲ್ಲಿ ಏನೇ ಅನಿಶ್ಚಿತತೆ, ಸಮಸ್ಯೆಗಳಿದ್ದರೂ ಅದನ್ನು ಮೀರಿ ಬೆಳೆಯಲು ಸಾಧ್ಯ. ಸದಾ ಒಳಿತನ್ನೇ ಆಲೋಚಿಸಿ ಇತರರಿಗೂ ಕೇಡನ್ನು ಬಯಸದೇ ಇದ್ದಲ್ಲಿ ಶಾ೦ತಿಯಿ೦ದ ಬದುಕಬಹುದು ಎ೦ದರು.
ಈ ಸಂದರ್ಭದಲ್ಲಿ ಮನಸ್ಸಿನ ಸಾಮಾರ್ಥ್ಯ ವಿದ್ಯಾರ್ಥಿಗಳಿಗೆ ಅರಿವಾಗುವ೦ತೆ ಒ೦ದಷ್ಟು ಚಟುವಟಿಕೆಗಳನ್ನು ಈ ಸ೦ದರ್ಭದಲ್ಲಿ ಪ್ರದರ್ಶಿಸಲಾಯಿತು.
ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವ೦ದಿಸಿದರು.