Moodubidire: ಮೂಡುಬಿದಿರೆಯಲ್ಲಿ ಐವನ್ ಡಿಸೋಜಾರಿಗೆ ಸನ್ಮಾನ

Moodubidire: ಮೂಡುಬಿದಿರೆಯಲ್ಲಿ ಐವನ್ ಡಿಸೋಜಾರಿಗೆ ಸನ್ಮಾನ


ಮೂಡುಬಿದಿರೆ: ವಿಧಾನಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದ  ಐವನ್ ಡಿಸೋಜ ಅವರಿಗೆ ಕೆಥೋಲಿಕ್ ಸಭಾ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚಚ್೯ ಸಭಾಂಗಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. 

ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷನಿಷ್ಠೆ ಯ ಬದ್ಧತೆಯಿಂದ  ಕೆಲಸ ಮಾಡಿದ್ದು ತನ್ನ ಸೇವೆಯನ್ನು ಪರಿಗಣಿಸಿ ಎರಡನೇ ಅವಧಿಗೆ ಈ ಸನ್ಮಾನ ಲಭಿಸಿದೆ.  ಸಿಕ್ಕಿದ ಅವಕಾಶವನ್ನು ಬಳಸಿ ನೋಂದವರ ಸಹಾಯ ಹಸ್ತ ಒದಗಿಸುವ ಆದ್ಯತೆ ನೀಡುತ್ತೇವೆ. ಸಿದ್ದರಾಮಯ್ಯ ಸರಕಾರವು ಅಲ್ಪಸಂಬ್ಯಾತರ  ಅಭಿವೃದ್ದಿಗಾಗಿ ಒತ್ತು ನೀಡಿತ್ತಿದ್ದು ಈ ಬಾರಿ ಬಜೆಟ್ ನಲ್ಲಿ 200 ಕೋಟಿ ರೂ ಮೀಸಲಿಸಿದೆ.  ಇದನ್ನು ಸಮಾಜ ಬಾಂಧವರ ಸದುಪಯೋಗಪಡಿಸಿಕೊಳ್ಳಬೇಕು.  

ಮೂಡುಬಿದರೆ ವಲಯ ಚಚ್೯ಗಳ ಮುಖ್ಯ ಧರ್ಮಗುರು, ಓನಿಲ್ ಡಿಸೋಜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಐವನ್ ಡಿಸೋಜ ಅವರ ವ್ಯಕ್ತಿತ್ವದಲ್ಲಿಯೇ ನಾಯಕತ್ವ  ಗುಣವಿದೆ.  ಹಾಗಾಗಿ ಅವರು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಮತ್ತು ತ್ಯಾಗ ಮತ್ತು ಸೇವೆಯ ಗುಣವಿರುವವರು ಮಾತ್ರ  ನಾಯಕರಾಗಲು ಸಾಧ್ಯ ಎಂದರು.

 ವಕೀಲ ಪ್ರವೀಣ್ ಲೋಬೊ ಅಭಿನಂದನಾ ಭಾಷಣಗೈದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕಥೋಲಿಕ ಸಭಾ ಮೂಡುಬಿದಿರೆ ವಲಯ ಸಮಿತಿಯ ಆದ್ಯಾತ್ಮಿಕ ನಿರ್ದೇಶಕರು ವಂ.ಫಾ.ದೀಪಕ್ ನೋರೋನ್ಹ,  ಅಭಿನಂದನ ಸಮಿತಿಯ ಸಂಚಾಲಕ ರೋನಾಲ್ಡ್ ಸೇರಾವೊ, ಕಾರ್ಯದರ್ಶಿಗಳಾದ  ರೋಷನ್ ಮಿರಂದ, ಅವಿಲ್ ಡಿ'ಸೋಜ, ಉಪಸ್ಥಿತರಿದ್ದರು.

ಕಥೋಲಿಕ್ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷ ಅಲ್ವಿನ್ ರೋಡ್ರಿಗಸ್ ಸ್ವಾಗತಿಸಿದರು. ರಾಜಕೀಯ ಸಂಚಾಲಕಿ  ಅಗ್ನೇಸ್ ಡಿಸೋಜಾ ವಂದಿಸಿದರು. ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article