Moodubidire: ಯುವವಾಹಿನಿ ಮೂಡುಬಿದಿರೆ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Moodubidire: ಯುವವಾಹಿನಿ ಮೂಡುಬಿದಿರೆ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ


ಮೂಡುಬಿದಿರೆ: ಯುವವಾಹಿನಿ(ರಿ) ಮೂಡುಬಿದಿರೆ ಘಟಕದ ವತಿಯಿಂದ ಮತ್ತು ಶ್ರೀಶ ಸೌಹಾರ್ದ ಸಹಕಾರಿ ಸಂಘ, ಜೆ.ಸಿ.ಐ. ಭಾರ್ಗವ ಮುಂಡ್ಕೂರು, ಬಿಲ್ಲವ ಸಂಘ ಕಡಂದಲೆ ಪಾಲಡ್ಕ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಪಾಲಡ್ಕ, ಶ್ರೀ ಸತ್ಯ ಸಾಯಿ ಬಾಲ ವಿಕಾಸ ಕೇಂದ್ರ ಮಂಗಳೂರು, ಹಾಲು ಉತ್ಪಾದಕರ ಸಹಕಾರ ಸಂಘ ಕಡಂದಲೆ ಇವುಗಳ ಸಹಕಾರದೊಂದಿಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಮತ್ತು ದೇರಳಕಟ್ಟೆ ಏನೇಪೋಯ ದಂತ ವೈದ್ಯಕೀಯ ಆಸ್ಪತ್ರೆ ವೈದ್ಯರ ತಂಡದಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರವು ಬಿಲ್ಲವ ಸಂಘ ಕಡಂದಲೆ ಪಾಲಡ್ಕ ನಡೆಯಿತು.

ಯುವವಾಹಿನಿ (ರಿ) ಮೂಡುಬಿದರೆ ಘಟಕದ ಅಧ್ಯಕ್ಷ ಶಂಕರ ಎ.ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ 

ಕಾರ್ಯಕ್ರಮವನ್ನು ಸುಚರಿತ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಹಳ್ಳಿ ಪ್ರದೇಶದಲ್ಲಿ ಬಡ ಜನರಿಗೆ ಈ ಆರೋಗ್ಯ ತಪಾಸಣಾ ಶಿಬಿರದಿಂದ ಬಹಳಷ್ಟು ಪ್ರಯೋಜನವು ಸಿಗಲಿದ್ದು ಯುವವಾಹಿನಿ ಹಾಗೂ ಇತರ ಸಂಸ್ಥೆಗಳು ಸೇರಿಕೊಂಡು ನಡೆಸುವ ಈ ಶಿಬಿರವು ಅತ್ಯುತ್ತಮ ಸಮಾಜ ಸೇವೆಯ ಭಾಗವಾಗಿದ್ದು ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದರು.

ಬಿಲ್ಲವ ಸಂಘ ಪಾಲಡ್ಕ ಇದರ ಅಧ್ಯಕ್ಷ ಲೀಲಾದರ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಶ್ರೀ ಸುರೇಶ್, ವಿಜಿಬಿಲಿಟಿ, ಶ್ರೀಷ ಸೌಹಾರ್ದ ಸಹಕಾರಿ ಸೊಸೈಟಿ ಮಂಗಳೂರು, ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರೇರಣಾ, ಏನೆಪೋಯ ದಂತ ಚಿಕಿತ್ಸಾಲಯ ದೇರಳಕಟ್ಟೆ ಇದರ ಉಪನ್ಯಾಸಕಿ ಡಾ. ಅಲ್ಫಿಯಾ, ಶ್ರೀಷ ಸೌಹಾರ್ದ ಕೊ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಮ್ ಎಸ್. ಗುರುರಾಜ್, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಪಾಲಡ್ಕ ಇದರ ಸಂಚಾಲಕ ಶಿವರಾಂ, ಆರೋಗ್ಯ ನಿರ್ದೇಶಕಿ ಅನಿತಾ ಮುಂದ್ರೋಟ್ಟು, ಯೆನೆಪೋಯ ಡೆಂಟಲ್ ಕಾಲೇಜ್ ಮಂಗಳೂರು ಇದರ ಸಂಪರ್ಕಾಧಿಕಾರಿ ಭರತ್ ಅತಿಥಿಗಳಾಗಿ ಭಾಗವಹಿಸಿದ್ದರು.

ಯುವ ವಾಹಿನಿ (ರಿ) ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ನವಾನಂದ, ಪ್ರಥಮ ಉಪಾಧ್ಯಕ್ಷ ಮುರಳಿಧರ್ ಕೋಟ್ಯನ್, ಪ್ರಚಾರ ನಿರ್ದೇಶಕ ಆದರ್ಶ ಸುವರ್ಣ, ಸದಸ್ಯರಾದ ಉಮೇಶ್ ಕೋಟ್ಯಾನ್, ಜೀವಿತ ಶಂಕರ್, ಸಪ್ನ ಕೋಟ್ಯಾನ್, ಅನುಪ ಮತ್ತಿತರರು ಉಪಸ್ಥಿತರಿದ್ದರು.

ಹರಿಪ್ರಸಾದ್ ಪಿ. ಮಾಜಿ ಅಧ್ಯಕ್ಷರು ಯುವವಾಹಿನಿ(ರಿ) ಮೂಡುಬಿದಿರೆ ಘಟಕ ಇವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 225 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ೧೮೩ ಮಂದಿ ಜನರಲ್ ಚೆಕಪ್ ನಡೆಸಿ, 42 ಮಂದಿ ಉಚಿತ ದಂತ ಚಿಕಿತ್ಸೆ ತಪಾಸಣೆ ನಡೆಸಿದರು. ಒಟ್ಟು 43 ಮಂದಿ ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 63 ಮಂದಿ ರೋಗಿಗಳಿಗೆ ಉಚಿತ ಚಿಕಿತ್ಸೆ ನಡೆಸಿ ಉಚಿತ ಔಷದ ನೀಡಲಾಯಿತು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article