ಕಡಂದಲೆಯಲ್ಲಿ ಗದ್ದೆ, ತೋಟ, ರಸ್ತೆ ಜಲಾವೃತ

ಕಡಂದಲೆಯಲ್ಲಿ ಗದ್ದೆ, ತೋಟ, ರಸ್ತೆ ಜಲಾವೃತ


ಮೂಡುಬಿದಿರೆ: ಕಳೆದ ಒಂದು ವಾರದಿಂದ ಬೀಳುತ್ತಿರುವ ಅಧಿಕ ಮಳೆಯಿಂದಾಗಿ ಮೂಡುಬಿದಿರೆ ತಾಲೂಕಿನ ಕೆಲವು ಪಂಚಾಯತ್ ವ್ಯಾಪ್ತಿಗಳಲ್ಲಿ ಬಿತ್ತಿದ ಗದ್ದೆಗಳು ನೀರುಪಾಲಾಗಿದ್ದು, ತೋಟ ರಸ್ತೆಗಳು ಜಲಾವೃತಗೊಂಡಿರುವುದರಿಂದ ಜನ ಸಂಚಾರಕ್ಕೆ ತೊಂದರೆಯಾಗಿದೆ. 

ಕಳೆದೆರಡು ದಿನಗಳಿಂದ ಮಳೆಯು ಎಡೆಬಿಡದೆ ಸುರಿಯುತ್ತಿರುವುದರಿಂದ ಪಾಲಡ್ಕ ಗ್ರಾ.ಪಂಚಾಯತ್ ವ್ಯಾಪ್ತಿಯ ಕಡಂದಲೆಯಲ್ಲಿ ತೋಟ, ಗದ್ದೆ, ರಸ್ತೆ ಜಲಾವೃತಗೊಂಡಿದೆ.

ಕಡಂದಲೆಯ ಮಡಿಕೆ ದೇವು ಪೂಜಾರಿ ಮತ್ತು ಬಾಬು ಶೆಟ್ಟಿ ಅವರು ನಾಟಿ ಮಾಡಿದ ಭತ್ತದ ಬೆಳೆ ನದಿ ಪಾಲಾಗಿದೆ.

ಕಲ್ಲೋಳಿ ಪ್ರದೇಶದಲ್ಲಿ ರಸ್ತೆಗೆ ನದಿ ನೀರು ಬಂದಿರುವುದರಿಂದ ಪಾದಾಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗಿದೆ. ಸಂಜೆ ವೇಳೆಗೆ ಡೈರಿಗೆ ಹಾಲು ಹಾಕುವವರು ಹೋಗುವವರು ಸುತ್ತು ಬಳಸಿ ಹೋಗಬೇಕಾಗಿದೆ.

ಶಾಂಭವಿ ನದಿಯಲ್ಲೂ ನೀರಿನ ಮಟ್ಟ ಹೆಚ್ಚಾಗಿದ್ದು ಪಕ್ಕದಲ್ಲಿರುವ ಅಡಿಕೆ ತೋಟಗಳಲ್ಲಿ ನೀರು ತುಂಬಿಕೊಂಡಿದೆ.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article