
Moodubidire: ಮೂಡುಮಾರ್ನಾಡು ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪ್ರಮಾಣವಚನ, ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಇಲ್ಲಿಗೆ ಸಮೀಪದ ಮೂಡುಮಾರ್ನಾಡು ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮವು ನಡೆಯಿತು.
ಶಾಲಾ ಮುಖ್ಯಮಂತ್ರಿ ಸ್ಮರಣ್, ಉಪಮುಖ್ಯಮಂತ್ರಿ ಸುಮಂತ್, ವಿರೋಧ ಪಕ್ಷದ ನಾಯಕರುಗಳಾದ ಲಿಖಿತ್, ಅನನ್ಯ ಸಹಿತ ಮಂತ್ರಿಮಂಡಲಕ್ಕೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶೋಧರ ಆಚಾರ್, ಶಾಲಾ ಮುಖ್ಯ ಶಿಕ್ಷಕಿ ಡಾ. ರಾಜಶ್ರೀ, ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ಪ್ರಮಾಣವಚನ ಬೋಧಿಸಿದರು.
2024ರ ಎಸ್.ಎಸ್.ಎಲ್.ಸಿ.ಯಲ್ಲಿ ಶಾಲೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಾಕ್ಷಿ, ಭಾರ್ಗವಿ, ಹೃತಿಕ್ ಅವರಿಗೆ ನಗದು ಪ್ರೋತ್ಸಾಹದೊಂದಿಗೆ ಸನ್ಮಾನಿಸಲಾಯಿತು.
ಅದೇ ರೀತಿ 2023ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಯೂ ಅತಿ ಹೆಚ್ಚು ಅಂಕಗಳಿಸಿದ ಅನುಕ್ಷಿತಾ, ಪ್ರತಿಕ್ಷಾ ಹಾಗೂ ಕ್ಷುತಿಕ್ ಅವರನ್ನು ಸನ್ಮಾನಿಸಲಾಯಿತು.
ಅಕ್ಷರ ದಾಸೋಹದ ಸಿಬ್ಬಂದಿಗಳಾದ ವನಿತ, ಶಕುಂತಲಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಅದೇ ರೀತಿ ದಕ್ಷಿಣ ಭಾರತ ಮಟ್ಟದ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ 9ನೇ ತರಗತಿಯ ಸುಮಂತ್ ಅವರನ್ನು ಸನ್ಮಾನಿಸಲಾಯಿತು.
ಪರಿಸರ, ಪ್ರಕೃತಿ, ಶಾಲೆಯ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಹೇಗೆ, ಯಾವ್ಯಾವ ಕೊಡುಗೆಗಳನ್ನು ನೀಡಬಹುದು ಎಂಬುದರ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪತ್ರಕರ್ತ ರಾಯಿ ರಾಜಕುಮಾರ್ ಮಾಹಿತಿ ನೀಡಿದರು.
ಮೂಡುಮಾರ್ನಾಡು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಡಿ'ಸೋಜಾ ಅವರು ಮೂಡುಬಿದಿರೆಯಲ್ಲಿ ಪ್ರಪ್ರಥಮ ಬಾರಿಗೆ ಆಯ್ಕೆಗೊಂಡ ಶಾಲೆಗೆ ಪ್ರಧಾನಮಂತ್ರಿ ಯೋಜನೆಯಿಂದ ಶಾಲೆಗೆ ದೊರಕಿದ ಸಹಾಯಧನ, ಕಾಮಗಾರಿ ಇತ್ಯಾದಿಗಳ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶಕುಂತಲಾ ಶೆಟ್ಟಿ, ಎಸ್ ಡಿಎಂಸಿ ಸದಸ್ಯರುಗಳಾದ ಸದಾಶಿವ ಸಾಲಿಯಾನ್, ಸತೀಶ್ ಶೆಟ್ಟಿ, ಅಶೋಕ ದೇವಾಡಿಗ, ಸರೋಜಿನಿ, ಸುಶೀಲ, ಸುಗಂಧಿ, ಮಂಜುಳಾ, ಗಂಗಾಧರ, ರಜಿಯಾ, ಆಶಾಲತಾ ಉಪಸ್ಥಿತರಿದ್ದರು.
ಶಿಕ್ಷಕ ಜಾನ್ ರೊನಾಲ್ಡ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. ನವೀನ್ ಎಸ್ ಪುತ್ರನ್ ವಂದಿಸಿದರು.