ಗಾಳಿ ಮಳೆಗೆ ಮನೆ ಜಖಂ: ಕುಟುಂಬಕ್ಕೆ ಸಮಾಜ ಮಂದಿರದಲ್ಲಿ ಆಶ್ರಯ

ಗಾಳಿ ಮಳೆಗೆ ಮನೆ ಜಖಂ: ಕುಟುಂಬಕ್ಕೆ ಸಮಾಜ ಮಂದಿರದಲ್ಲಿ ಆಶ್ರಯ


ಮೂಡುಬಿದಿರೆ: ಸ್ವರಾಜ್ಯ ಮೈದಾನದ ಬಳಿ ಬೀಸಿದ ಗಾಳಿ ಮಳೆಯಿಂದಾಗಿ ಲಕ್ಷೀ ಬೋವಿ ಅವರ ಮನೆಗೆ ಮರ ಬಿದ್ದು ಜಖಂಗೊಂಡ ಹಿನ್ನಲೆಯಲ್ಲಿ ಈ ಕುಟುಂಬಕ್ಕೆ ಸಮಾಜ ಮಂದಿರದಲ್ಲಿ ಆಶ್ರಯ ನೀಡಲಾಗಿದೆ.

 ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಸೂಚನೆಯಂತೆ ಲಕ್ಷ್ಮೀ ಅವರ ಹಾನಿಗೊಳಗಾಗಿರುವ ಮನೆಯನ್ನು ಸರಿ ಪಡಿಸುವ ತನಕ ಸಮಾಜ ಮಂದಿರದಲ್ಲೇ ಉಳಿದುಕೊಳ್ಳಲು ಮತ್ತು ಅವಶ್ಯಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಕಂದಾಯ ನಿರೀಕ್ಷಕ  ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್  ಪ್ರಭು, ಪುರಸಭಾ ಸಿಬಂದಿ ಸುಧೀಶ್ ಹೆಗ್ಡೆ ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article