ಮಹಿಳೆಯ ‘ಸ್ನಾನ’ ಇಣುಕಿದಾತ ಪೊಲೀಸರ ಅತಿಥಿಯಾದ..!
Monday, July 22, 2024
ಪುತ್ತೂರು: ಸ್ನಾನದ ಮನೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ಇಣುಕಿ ನೀಡಿದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಕಸಬಾ ನಿವಾಸಿ ರಹಿಮಾನ್ ಎಂಬಾತ ಈ ಕೃತ್ಯ ಎಸಗಿದ ವ್ಯಕ್ತಿ. ಭಾನುವಾರ ರಾತ್ರಿ ಜನತಾ ಕಾಲೊನಿಯ ನಿವಾಸಿಯಾದ ಈತ ತನ್ನ ಪಕ್ಕದ ಮನೆಯ ಮಹಿಳೆ ಸ್ನಾನಗೃಹದಲ್ಲಿರುವುದನ್ನು ತಿಳಿದು ಕಿಟಕಿ ಮೂಲಕ ಇಣುಕಿ ನೋಡಿದ್ದು, ತಕ್ಷಣ ಹೊರ ಬಂದ ಮಹಿಳೆಗೆ ಈತ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಎಂದು ತಿಳಿದುಬಂದಿದೆ.
ಸ್ಥಳೀಯರಿಂದ ಧರ್ಮದೇಟು..!:
ಯಾವಾಗ ಆ ಮನೆಯ ಮಹಿಳೆ ಹೊರಬಂದು ನೋಡಿರುವುದು ರಹಿಮಾನ್ ಗಮನಕ್ಕೆ ಬಂದ ತಕ್ಷಣ ಆತ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಮಹಿಳೆ ಹಾಕಿದ ಬೊಬ್ಬೆಯ ಕಾರಣದಿಂದ ಒಂದಾದ ಸ್ಥಳೀಯರು ಬೇಕಾಬಿಟ್ಟಿಯಾಗಿ ಧರ್ಮದೇಟು ನೀಡಿ ನಂತರ ಆತನನ್ನು ಉಪ್ಪಿನಂಗಡಿ ಠಾಣೆಗೆ ತಂದು ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಉಪ್ಪಿನಂಗಡಿ ಪೊಲೀಸರ ಪ್ರಕಾರ ಆತ ಕಂಪೌಂಡು ಹಾರಿ ಬಿದ್ದ ಕಾರಣ ಆರೋಪಿಯ ಮೇಲೆ ತರಚು ಗಾಯವಾಗಿತ್ತು ಎಂದು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.